Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿವು ಪಾರು ಅಮೆರಿಕ ಸುರೇಶ್ ಆನಂದದ ಸಮಯ
Posted date: 26 Thu, Apr 2018 02:06:01 PM
ಅಮೆರಿಕದಿಂದ ಬಂದ ಈ ಹೊಸಕೋಟೆಯ ಲವಲವಿಕೆಯ ವ್ಯಕ್ತಿ ಅಮೆರಿಕ ಸುರೇಶ್ ಪ್ರಥಮ ಚಿತ್ರ ಶಿವು ಪಾರು ಬಿಡುಗಡೆ ಸಮಯ ಹತ್ತಿರ ಬರುತ್ತಿದ್ದಂತೆ ಆನಂದದಲ್ಲಿ ತೇಲಿ ಹೋಗಲು ಮೂರು ಕಾರಣಗಳಿವೆ.
ಮೊದಲಿಗೆ ಅಮೆರಿಕ ಸುರೇಶ್ ಅವರ ದಯಾಪರ ಕೆಲಸಕ್ಕೆ ಎನ್ ವಿ ಯು ಪಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಇದು ಅವರ ಸೇವೆಯನ್ನು ಗುರುತಿಸಿ ನೀಡಲಾಗಿದೆ. ಇದೇ ಸಮಯಕ್ಕೆ ಅಮೆರಿಕ ಸುರೇಶ್ ಅವರ ಸಿನಿಮಾ ‘ಶಿವು ಪಾರು’ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ೨೦೧೮ಕ್ಕೆ ಆಯ್ಕೆ ಆಗಿದೆ. ಈ ಸಿನಿಮಾವನ್ನು ಕರ್ನಾಟಕದಾದ್ಯಂತ ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಬೇಕು ಎಂದು ಸಕಲಕಲಾ ವಲ್ಲಭ ಅಮೆರಿಕ ಸುರೇಶ್ ನಿರ್ಧರಿಸಿದ್ದಾರೆ.
ಅಮೆರಿಕ ದೇಶದ ನಿವಾಸಿ ಅಮೆರಿಕ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಭಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ ‘ಶಿವು ಪಾರು’.
ಕಳೆದ ೨೦ ವರ್ಷಗಳಿಂದ ಅಮೆರಿಕ ದೇಶದಲ್ಲಿದ್ದು ಹಾಲಿವುಡ್‌ನಲ್ಲಿ ಕೆಲಸ ಮಾಡಿ, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅನೇಕ ಕತೆಗಳನ್ನು ರಚಿಸಿ, ಅಮೆರಿಕ ಬ್ಯಾಂಕ್ ಅಲ್ಲಿ ಸಾಫ್ಟ್ ವೇರ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸಿರುವ ಹೊಸಕೋಟೆಯ ಈ ಅಮೆರಿಕ ಸುರೇಶ್ ಕನ್ನಡ ಸಿನಿಮಾ ಮಾಡುವ ಆಸೆ ಇಟ್ಟುಕೊಂಡು ಅಪಾರ ಶ್ರಮ ಸಹ ವ್ಯಯ ಮಾಡಿದ್ದಾರೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಎಂದು ಬಣ್ಣಿಸುತ್ತಾರೆ.
ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ, ಹಾಲೇಶ್ ಛಾಯಾಗ್ರಹಣ, ಜೀವನ್ ಸಂಕಲನ, ಅಮೆರಿಕ ಸುರೇಶ್ ಗೀತ ಸಾಹಿತ್ಯ ಹಾಗೂ ಸಂಗೀತ, ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.
‘ಶಿವ ಪಾರು’ ಚಿತ್ರಕ್ಕೆ ಯಮನ ಗೆದ್ದ ಶಿವು, ದೇವಲೋಕದ ಪ್ರೇಮ ಲೋಕ, ಕಿಟ್ಟಪ್ಪ ಯಾಕೆ ಶಿವು ಹತ್ಯೆ ಮಾಡಿದ, ಯಾಕೆ ಪಾರು ಆತ್ಮಹತ್ಯೆ ಮಾಡಿಕೊಂಡಳು - ವಿಚಾರಗಳು ಅಪಾರ ಕುತೂಹಲ ಹುಟ್ಟು ಹಾಕಿದೆ.
ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ ‘ಶಿವು ಪಾರು’ ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ,ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ.  ‘ಪ್ಯಾಟೆ ಹುಡ್ಗಿರ್ ಹಳ್ಳಿಗ್ ಬಂದ್ರು’ ೬ ನೇ ಕಂತು ರಿಯಾಲಿಟಿ ಕಾರ್ಯಕ್ರಮ ಸಹ ಚಿತ್ರದ ಅಂಶಗಳಲ್ಲಿ ಒಂದು. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿವು ಪಾರು ಅಮೆರಿಕ ಸುರೇಶ್ ಆನಂದದ ಸಮಯ - Chitratara.com
Copyright 2009 chitratara.com Reproduction is forbidden unless authorized. All rights reserved.