Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀ ವಿಷ್ಣು ದಶಾವತಾರದಲ್ಲಿ ಹಿರಣ್ಯಕಶ್ಯಪುವಾಗಿ ನವೀನ್ ಕೃಷ್ಣ
Posted date: 05 Sat, Jan 2019 09:02:23 AM

ಜೀಕನ್ನಡ ವಾಹಿನಿಯಲ್ಲಿ ಸೋಮ-ಶುಕ್ರರಾತ್ರಿ ೮ ಗಂಟೆಗೆ ಪ್ರಸಾರವಾಗುತ್ತಿರುವಶ್ರೀ ವಿಷ್ಣು ದಶಾವತಾರಧಾರಾವಾಹಿಯು ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದೆ. ಪುರಾಣಕತೆಯ ಹೊಸಬಗೆಯ ನಿರೂಪಣೆಜನಮೆಚ್ಚುಗೆ ಗಳಿಸಿದೆ. ಮತ್ಸ್ಯಾವತಾರ, ಕೂರ್ಮಾವತಾರ, ವರಾಹಾವತಾರಗಳು ಮುಗಿದು ಇದೀಗ ದಶಾವತಾರಗಳಲ್ಲಿ ಮುಖ್ಯ ಹಾಗೂ ಜನಜನಿತವಾಗಿರುವನರಸಿಂಹಾವತಾರದ ವೈಭವಆರಂಭವಾಗುತ್ತಿದೆ.

ನರಸಿಂಹಾವತಾರದಲ್ಲಿ ಬರುವಅತಿಮುಖ್ಯ ಮತ್ತುರೌದ್ರ ಪಾತ್ರ ಹಿರಣ್ಯಕಶ್ಯಪುವಿನದು. ಬೆಳ್ಳಿತೆರೆಯಲ್ಲಿ ಹಿರಣ್ಯಕಶ್ಯಪುಎಂದರೆಡಾ.ರಾಜಕುಮಾರ್‌ಒಬ್ಬರೇ. ಅಂಥ ಸವಾಲಿನ ಪಾತ್ರವನ್ನುಕಿರುತೆರೆಯಲ್ಲಿನಟ, ನಿರ್ದೇಶಕ ನವೀನ್ ಕೃಷ್ಣ ಅವರು ನಿರ್ವಹಿಸುತ್ತಿದ್ದಾರೆ.

ಪಾತ್ರಕ್ಕೆತಕ್ಕದೇಹದಾರ್ಢ್ಯತೆ, ಉಗ್ರ ನೋಟ, ಭಾಷಾ ಶುದ್ಧತೆ, ಅಭಿನಯ ಕೌಶಲ ಹೊಂದಿರುವ ನವೀನ್ ಕೃಷ್ಣ ಅವರು ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಡಾ.ರಾಜಕುಮಾರ್‌ಅವರು ಈ ಪಾತ್ರದಲ್ಲಿಛಾಪೊತ್ತಿರುವುದರಿಂದ, ಅವರಿಂದ ಸ್ಫೂರ್ತಿಗೊಂಡು ಈ ಪಾತ್ರ ನಿರ್ವಹಿಸುವುದಾಗಿ ವಿನಮ್ರವಾಗಿ ಹೇಳುತ್ತಾರೆ.

ಕದಂಬಚಿತ್ರದಲ್ಲಿಡಾ. ವಿಷ್ಣುವರ್ಧನ್‌ರಂತಹ ಮೇರುನಟರಎದುರು ಸಲೀಸಾಗಿ ನಟಿಸಿ ಸೈ ಎನ್ನಿಸಿಕೊಂಡಿರುವ ನವೀನ್‌ಕೃಷ್ಣ ಹಿರಿಯಕಲಾವಿದ ಶ್ರೀನಿವಾಸಮೂರ್ತಿಅವರ ಪುತ್ರ. ಧಾರಾವಾಹಿ, ಸಿನಿಮಾಗಳಲ್ಲಿ ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂತಮ್ಮದೇಛಾಪು ಮೂಡಿಸಿದವರು. ಜ಼ೀಕನ್ನಡ ವಾಹಿನಿಯಲ್ಲಿ ಮೂಡಿಬಂದಪತ್ತೇದಾರಿ ಪ್ರತಿಭಾಧಾರಾವಾಹಿ ನಿರ್ದೇಶಿಸಿದ್ದರು. ಪ್ರಸ್ತುತಕನ್ನಡಜಾನಪದ ಮಹಾಕಾವ್ಯಆಧಾರಿತಉಘೇ ಉಘೇ ಮಾದೇಶ್ವರಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು ಯಶಸ್ವಿ ಎನ್ನಿಸಿಕೊಂಡಿದೆ.  

ಡ್ರಾಮಜ್ಯೂನಿಯರ್ಸ್‌ಖ್ಯಾತಿಯಅಚಿಂತ್ಯ ಪ್ರಹ್ಲಾದನ ಪಾತ್ರದಲ್ಲಿ ಗಮನ ಸೆಳೆಯಲಿದ್ದಾನೆ .ಕಿರುತೆರೆ ನಟನೆಯಲ್ಲಿಖ್ಯಾತಿ ಪಡೆದಅರ್ಚನಅವರುಕಯಾದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀ ವಿಷ್ಣು ದಶಾವತಾರಧಾರಾವಾಹಿಯಲ್ಲಿನರಸಿಂಹಾವತಾರದ ಸಂಚಿಕೆಗಳು ಇದೇಜನವರಿ೮ ಮಂಗಳವಾರದಿಂದ ಪ್ರಸಾರಗೊಳ್ಳಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀ ವಿಷ್ಣು ದಶಾವತಾರದಲ್ಲಿ ಹಿರಣ್ಯಕಶ್ಯಪುವಾಗಿ ನವೀನ್ ಕೃಷ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.