Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಂಗೀತನಾದ ಟ್ರಸ್ಟ್ ೭ನೇ ವಾರ್ಷಿಕೋತ್ಸವದಲ್ಲಿ ರಾಜಾಶಂಕರ್ ನೆನಪಿನ ಗೀತಗಾಯನ
Posted date: 15 Mon, Oct 2018 09:18:02 AM

 ಸಂಗೀತನಾದ ಟ್ರಸ್ಟ್‌ನ ೭ ನೇ ವಾರ್ಷಿಕೋತ್ಸವ  ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನಟ, ನಿರ್ಮಾಪಕ ರಾಜಾಶಂಕರ್ ಅವರ ಅಭಿನಯದ ಹಳೇ ಚಲನಚಿತ್ರ ಗೀತೆಗಳ ಗೀತಗಾಯನ ಕಾರ್ಯಕ್ರಮ ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು ಎಂಬ ಶೀರ್ಷಿಕೆಯಡಿ ರಾಜಾಶಂಕರ್ ಅವರ ಅಭಿನಯದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ರಾಜಾಶಂಕರ್ ಅವರ ಧರ್ಮಪತ್ನಿ ಶ್ರೀಮತಿ ಶಾಂತಕುಮಾರಿ ರಾಜಾಶಂಕರ್ ಹಾಗೂ ಗಾಯಕಿ ಬಿಕೆ. ಸುಮಿತ್ರ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಚಿತ್ರರಂಗದಲ್ಲಿ ತನ್ನ ವಿಭಿನ್ನ ಶೈಲಿಯ ಅಭಿನಯದ ಮೂಲಕವೇ ಹೆಸರಾಗಿದ್ದ ನಟ ರಾಜಾಶಂಕರ್ ಅವರಿಗೆ ಈ ಸಂದರ್ಭದಲ್ಲಿ ಮರೆಯದ ಮಾಣಿಕ್ಯ ಎಂಬ ಬಿರುದನ್ನು ನೀಡಲಾಯಿತು.
    ಈ ಅದ್ವಿತೀಯ ಗೀತಗಾಯನ ಕಾರ್ಯಕ್ರಮದಲ್ಲಿ  ಸಂಗೀತನಾದ ಟ್ರಸ್ಟ್‌ನವರ ಪ್ರೀತಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗಾಯಕಿ ಬಿಕೆ. ಸುಮಿತ್ರ ಅವರು ನಮ್ಮಂಥ ಗಾಯಕಿಯರನ್ನು ಗುರುತಿಸಿ ಗೌರವಿಸುತ್ತಿರುವುದು ಕಲೆಗೆ ಕೊಡುತ್ತಿರುವ ಗೌರವ. ಅಲ್ಲದೆ ರಾಜಾಶಂಕರ್ ಅವರು ಒಬ್ಬ ಮಹಾನ್ ಕಲಾವಿದರು. ಅವರ ಅಭಿನಯದಲ್ಲಿ  ಮೂಡಿಬಂದಿರುವ ಚಲನಚಿತ್ರಗಳು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಮರೆಯದ ಕಲಾಕೃತಿಗಳಾಗಿವೆ. ಅಂಥವರನ್ನು ಗುರುತಿಸಿ ಗೌರವಿಸಿರುವುದು ಕೂಡ ಪ್ರಶಂಸನೀಯವಾದುದು ಎಂದು ಹೇಳಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನೌಕರರ ಸಂಘದ ಅಧ್ಯಕ್ಷರಾದ ಎಲ್. ಮೋಹನ್‌ಕುಮಾರ್, ಎಸ್.ಲಕ್ಷ್ಮೀಕಾಂತ್, ಸಿ. ಹೆಚ್. ಜಾಧವ್, ಎನ್.ಆರ್.ಪ್ರಭು, ರವಿತೇಜಸ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.  ಸಂಗೀತ ನಾದ ಟ್ರಸ್ಟ್ ಕಳೆದ ಆರು ವರ್ಷಗಳಿಂದ ಪ್ರತಿವರ್ಷ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷ ಇಬ್ಬ ಕನ್ನಡ ದಿಗ್ಗಜರ ನೆನಪಲ್ಲಿ ಸಂಗೀತ ಗಾಯನ ಕಾರ್ಯಕ್ರಮ ಏರ್ಪಡಿಸಿಕೊಂಡು ಬರುತ್ತಿದ್ದು, ಅದರಂತೆ ಈ ವರ್ಷ ಹಿರಿಯನಟ ರಾಜಾಶಂಕರ್ ಅವರ ನೆನಪಿನ ಸಂಗೀತ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ  ಸಂಗೀತ ಪ್ರಿಯರಿಗಾಗಿ  ಹಾಗೂ ರಾಜಾಶಂಕರ್ ಅವರ ಅಭಿಮಾನಿಗಳಿಗಾಗಿ ರಾಜಾಶಂಕರ್ ಅವರ ಅಭಿನಯದ ಹಲವಾರು ಸೂಪರ್ ಹಿಟ್ ಗೀತೆಗಳನ್ನು ನುರಿತ ಗಾಯಕರಿಂದ ಪ್ರಸ್ತುತ ಪಡಿಸಲಾಯಿತು.  ಕಾರ್ಯಕ್ರಮದ ಪರಿಕಲ್ಪನೆ ಎಂ.ಕೃಷ್ಣಮೂರ್ತಿ. ನಿರೂಪಣೆ ಸಾರತಹಳ್ಳಿ ನಾರಾಯಣಸ್ವಾಮಿ ಅವರದು.Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಂಗೀತನಾದ ಟ್ರಸ್ಟ್ ೭ನೇ ವಾರ್ಷಿಕೋತ್ಸವದಲ್ಲಿ ರಾಜಾಶಂಕರ್ ನೆನಪಿನ ಗೀತಗಾಯನ - Chitratara.com
Copyright 2009 chitratara.com Reproduction is forbidden unless authorized. All rights reserved.