Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಆನೆಬಲ ತೆರೆಗೆ
Posted date: 25 Wed, Dec 2019 10:48:54 AM

ಜನತಾ ಟಾಕೀಸ್ ಅವರ ಚೊಚ್ಚಲ ನಿರ್ಮಾಣದ ‘ಆನೆಬಲ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದು ಹೊಸ ಪ್ರತಿಭೆಗಳ ಚಿತ್ರವಾಗಿದ್ದು, ಡಾ||ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಮುದ್ದೆ ಮುದ್ದೆ‘ ಹಾಗೂ ‘ಮಳವಳ್ಳಿ ಜಾತ್ರೇಲಿ‘ ಹಾಡು ಜನಪ್ರಿಯವಾಗಿದೆ. ಅನೇಕ ಹೊಸ ಅಂಶಗಳನ್ನು ಹೊತ್ತು ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.
ಸೂನಗಹಳ್ಳಿ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ‘ಲೂಸಿಯಾ‘ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಒಂದು ಹಾಡನ್ನು ಬರೆದಿದ್ದಾರೆ. ಜೆ.ಟಿ.ಬೆಟ್ಟೇಗೌಡ ಛಾಯಾಗ್ರಹಣ, ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ.

ನಿರ್ಮಾಪಕರಾದ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ರೈತಾಪಿ ಕುಟುಂಬದಿಂದ ಬಂದಿದ್ದು ಅವರು ಚೊಚ್ಚಲ ಬಾರಿಗೆ ನಿರ್ಮಿಸಿರುವ ಚಿತ್ರ ಇದಾಗಿದೆ. ಸಾಗರ್, ರಕ್ಷಿತ, ಮಲ್ಲರಾಜು, ಚಿರಂಜೀವಿ, ಹರೀಶ್, ಗೌತಮ್, ಮುತ್ತುರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಆನೆಬಲ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.