Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಹಸಸಿಂಹ ಡಾ||ವಿಷ್ಣುವರ್ಧನ ಅಭಿನಯದ `ಸೂರ್ಯವಂಶ` ಚಿತ್ರ ಬಿಡುಗಡೆಯಾಗಿ 20ವರ್ಷ
Posted date: 13 Thu, Jun 2019 08:35:27 AM

ಎಚ್.ಡಿ ಕುಮಾರಸ್ವಾಮಿ ಅವರು ನಿರ್ಮಿಸಿ, ಎಸ್. ನಾರಾಯಣ್ ನಿರ್ದೇಶಿಸಿ, ಸಾಹಸಸಿಂಹ ವಿಷ್ಣುವರ್ಧನ ಅವರು ನಾಯಕರಾಗಿ ನಟಿಸಿದ್ದ ‘ಸೂರ್ಯವಂಶ‘  ಚಿತ್ರ ಬಿಡುಗಡೆಯಾಗಿ ಇದೇ ಜೂನ್ 15ಕ್ಕೆ 20 ವರ್ಷಗಳಾಗಲಿದೆ. 1999ರ ಜೂನ್ 15ರಂದು ‘ಸೂರ್ಯವಂಶ‘ ಚಿತ್ರ ಬಿಡುಗಡೆಯಗಿತ್ತು.
ಚಿತ್ರ ನಿರ್ಮಾಪಕರಾಗಿ ಕುಮಾರಸ್ವಾಮಿಯವರು ಈ ಚಿತ್ರದ ಮೂಲಕ ಖ್ಯಾತರಾದರು. ‘ವೀರಪ್ಪನಾಯಕ‘ ಚಿತ್ರದ ನಂತರ ಡಾ||ವಿಷ್ಣುವರ್ಧನ ಅವರಿಗೂ ಬಹು ದೊಡ್ದ ಮಟ್ಟದ ತಾರಾಗಿರಿ ತಂದುಕೊಟ್ಟ ಚಿತ್ರ ಸೂರ್ಯವಂಶ.   
ಇದೇ ಹೆಸರಿನ ತಮಿಳು ಚಿತ್ರದ ರಿಮೇಕ್ ಇದು. ನಾಲ್ಕು ಭಾಷೆಗಳಲ್ಲಿ ಈ ಚಿತ್ರ ತಯಾರಾಯಿತು. ಆ ಎಲ್ಲಾ ಭಾಷೆಗಳ ಗಳಿಕೆಯಲ್ಲಿ ಕನ್ನಡದ ಸೂರ್ಯವಂಶ ಧ್ವಂಸ ಮಾಡಿತು. ‘ಸೂರ್ಯವಂಶ‘ ಚಿತ್ರದ ಆಡಿಯೋ ಕೂಡ ಭರ್ಜರಿ ಹೆಸರು ಪಡೆಯಿತು. ಈ ಚಿತ್ರದ ಆಡಿಯೋ ಹಕ್ಕನ್ನು ಜೆಂಕಾರ್ ಮ್ಯೂಸಿಕ್‌ನ ಸುರೇಶ್ ಜೈನ್ ಅವರು ಪಡೆದಿದ್ದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಅವರಿಗೆ ‘ಜನುಮದ ಜೋಡಿ‘ಯ ನಂತರ ಬಹುದೊಡ್ದ ಹೆಸರು ತಂದುಕೊಟ್ಟ ಚಿತ್ರ ‘ಸೂರ್ಯವಂಶ‘. ಚಿತ್ರ ತೆರೆಕಂಡು 20ವರ್ಷ ತುಂಬಿದ ಈ ಸಂದರ್ಭದಲ್ಲಿ ನಿರ್ದೇಶಕ ಎಸ್.ನಾರಾಯಣ್ ತಮ್ಮ ನೆನಪುಗಳನ್ನು ಮೆಲಕು ಹಾಕಿದ್ದಾರೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಹಸಸಿಂಹ ಡಾ||ವಿಷ್ಣುವರ್ಧನ ಅಭಿನಯದ `ಸೂರ್ಯವಂಶ` ಚಿತ್ರ ಬಿಡುಗಡೆಯಾಗಿ 20ವರ್ಷ - Chitratara.com
Copyright 2009 chitratara.com Reproduction is forbidden unless authorized. All rights reserved.