Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸುವರ್ಣ ಸುಂದರಿ ಹಾಡು ಮೆಚ್ಚಿದ ಶ್ರೀಮುರಳಿ
Posted date: 07 Thu, Mar 2019 12:50:33 PM

ಜನಪ್ರಿಯ ನಟ ಶ್ರೀಮುರಳಿ ಅವರು ಇತ್ತೀಚಿಗೆ ‘ಸುವರ್ಣ ಸುಂದರಿ’ ಹಾಡನ್ನು ಬಿಡುಗಡೆ ಮಾಡಿ ಅದರ ಕ್ವಾಲಿಟಿ ಅನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಸುವರ್ಣ ಸುಂದರಿ ಬಹು ಕೋಟಿ ವೆಚ್ಚದ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಎಂ ಎಸ್ ಎನ್ ಸೂರ್ಯ ಅವರ ನಿರ್ದೇಶನದ ಚಿತ್ರ 50 ನಿಮಿಷಗಳ ಗ್ರಾಫಿಕ್ಸ್ ಚಮತ್ಕಾರ ಒಳಗೊಂಡಿದೆ. ಹೆಸರಾಂತ ಕಲಾವಿದರುಗಳಾದ ಡಾ ಜಯಪ್ರದಾ, ಸಾಯಿಕುಮಾರ್, ಸಾಕ್ಷಿ, ಪೂರ್ಣ, ತಿಲಕ್, ಅವಿನಾಷ್, ಜೈ ಜಗದೀಶ್, ಕುಕ್ಥರ್ ಖಾನ್, ಶಾನ್ ಹಾಗೂ ಇತರರು ಚಿತ್ರದಲ್ಲಿದ್ದಾರೆ.
ಇದು 11508 ರಿಂದ 2018 ರ ವರೆಗೆ ಜರುಗುವ ಕಥೆ. ಬೆಂಗಳೂರು, ಚಿಕ್ಕಮಗಳೂರು, ಕೇರಳ, ಅನಂತಪುರ ಮತ್ತು ಹೈದರಾಬಾದಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಎಂ ಎನ್ ಲಕ್ಷ್ಮಿ ನಿರ್ದೇಶಕ ಎಂ ಎಸ್ ಎನ್ ಸೂರ್ಯ ಅವರ ಸಹೋದರಿ ಈ ಚಿತ್ರದ ನಿರ್ಮಾಪಕಿ. ಸಾಯಿ ಕಾರ್ತಿಕ್ ಸಂಗೀತ ಹಾಗೂ ರೀ ರೆಕಾರ್ಡಿಂಗ್ ಮಾಡಿದ್ದಾರೆ. ರಾಮ್ ಸುಂಕರ್ ಚಿತ್ರಕ್ಕೆ ಸಾಹಸ ಒದಗಿಸಿದ್ದಾರೆ. ಇದು ಎಸ್ ಟೀಮ್ ಪಿಕ್ಚರ್ ನಿರ್ಮಾಣ. ವೈ, ಈಶ್ವರ್ ಈ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸುವರ್ಣ ಸುಂದರಿ ಹಾಡು ಮೆಚ್ಚಿದ ಶ್ರೀಮುರಳಿ - Chitratara.com
Copyright 2009 chitratara.com Reproduction is forbidden unless authorized. All rights reserved.