Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸುವರ್ಣ ಸುಂದರಿ 45 ನಿಮಿಷದ ಗ್ರಾಫಿಕ್ಸ್
Posted date: 22 Wed, May 2019 09:00:10 AM

ಇದೇ ತಿಂಗಳು 31 ರಂದು ಬಿಡುಗಡೆಗೆ ಸಜ್ಜಾಗಿರುವ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರಕ್ಕೆ ಒಟ್ಟಾರೆ ೪೫ ನಿಮಿಷದ ಗ್ರಾಫಿಕ್ಸ್ ಚಮತ್ಕಾರವನ್ನು ಅಳವಡಿಸಲಾಗಿದೆ.

ಹೆಸರಾಂತ ಕಲಾವಿದರುಗಳಾದ ಡಾ ಜಯಪ್ರದಾ, ಸಾಯಿಕುಮಾರ್, ಸಾಕ್ಷಿ, ಪೂರ್ಣ, ತಿಲಕ್, ಅವಿನಾಷ್, ಜೈ ಜಗದೀಶ್, ಕುಕ್ತರ್ ಖಾನ್, ಶಾನ್ ಹಾಗೂ ಇತರರು ಚಿತ್ರದಲ್ಲಿದ್ದಾರೆ. ಇದು 1508 ರಿಂದ 2018 ರ ವರೆಗೆ ಜರುಗುವ ಕಥೆ. ಬೆಂಗಳೂರು, ಚಿಕ್ಕಮಗಳೂರು, ಕೇರಳ, ಅನಂತಪುರ ಮತ್ತು ಹೈದರಾಬಾದಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ಎಂ ಎಸ್ ಎನ್ ಸೂರ್ಯ ಅವರ ಸಹೋದರಿ ಎಂ ಎನ್ ಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ. ಸಾಯಿ ಕಾರ್ತಿಕ್ ಸಂಗೀತ ಹಾಗೂ ರೀ ರೆಕಾರ್ಡಿಂಗ್ ಮಾಡಿದ್ದಾರೆ. ರಾಮ್ ಸುಂಕರ್ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ. ಇದು ಎಸ್ ಟೀಮ್ ಪಿಕ್ಚರ್ ನಿರ್ಮಾಣ. ವೈ, ಈಶ್ವರ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸುವರ್ಣ ಸುಂದರಿ 45 ನಿಮಿಷದ ಗ್ರಾಫಿಕ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.