Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆನ್ಸಾರ್ ಮೆಚ್ಚಿದ `ಬಾಡಿಗಾರ್ಡ್`
Posted date: 15 Sat, Oct 2011 ? 09:32:55 AM

ಶಿವಲಿಂಗಪ್ಪ ಅರ್ಪಿಸುವ, ಗುರುರಾಜ ಫ಼ಿಲಂಸ್ ಲಾಂಛನದಲ್ಲಿ ಶ್ರೀಮತಿ ಪರಿಮಳಾಜಗ್ಗೇಶ್ ಹಾಗೂ ಜಗ್ಗೇಶ್ ಅವರು ನಿರ್ಮಿಸಿರುವ ‘ಬಾಡಿಗಾರ್ಡ್ ಚಿತ್ರವನ್ನು  ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಬಗ್ಗೆ ಮಂಡಳಿ ಮೆಚ್ಚುಗೆಯ ಮಾತುಗಳನಾಡಿದೆ.
    ಹಾಸ್ಯಮಯ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದ್ದು, ಬೆಂಗಳೂರು, ಬಾದಾಮಿ, ಐಹೊಳೆ, ಬಿಜಾಪುರ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
     ಟಿ.ಎ.ಆನಂದ್ ಚೊಚ್ಚಲ ನಿರ್ದೇಶನದ ಈ ಚಿತ್ರದ ನಾಯಕರಾಗಿ ಜಗ್ಗೇಶ್ ಅಭಿನಯಿಸಿದ್ದಾರೆ. ಡೈಸಿ ಶಾ, ಸ್ಪೂರ್ತಿ, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್, ಗುರುದತ್, ಜಯಶ್ರೀ, ಜೀವನ್, ಅಲಿ, ವಿನಯ್‌ಚಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಶೋಕ್‌ವಿರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿನಯ್‌ಚಂದ್ರ ಸಂಗೀತ ನೀಡಿದ್ದಾರೆ.  ರಾಜೇಂದ್ರ ಕಾರಂತ್ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ‘ಬಾಡಿಗಾರ್ಡ್ ಹಾಡುಗಳನ್ನು ಕವಿರಾಜ್, ರಾಂನಾರಾಯಣ್, ವಿ.ಮನೋಹರ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆನ್ಸಾರ್ ಮೆಚ್ಚಿದ `ಬಾಡಿಗಾರ್ಡ್` - Chitratara.com
Copyright 2009 chitratara.com Reproduction is forbidden unless authorized. All rights reserved.