Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆನ್ಸಾರ್ ಹಂತದಲ್ಲಿ ಅಸತೋಮ ಸದ್ಗಮಯ
Posted date: 08 Thu, Mar 2018 04:59:50 PM
ಐಕೇರ್ ಮೂವೀಸ್ ಲಾಂಛನದಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿರುವ ಅಸತೋಮ ಸದ್ಗಮಯ ಕನ್ನಡ ಚಲನಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಸೆನ್ಸಾರ್ ಹಂತಕ್ಕೆ ತಲುಪಿದೆ. ಅಸತೋಮ ಸದ್ಗಮಯ ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ನೋಡಲೇಬೆಕಾದಂತಹ ಸಿನೆಮಾ ಎಂಬುದು ನಿರ್ದೇಶಕರ ಅಭಿಪ್ರಾಯ. ಸದ್ಯದಲ್ಲೆ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿಜಯಪ್ರಕಾಶ್, ಅನುರಾಧ ಭಟ್, ಪದ್ಮಲತಾ ಅವರ ಕಂಠಗಳಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎನ್ನುತ್ತದೆ ಚಿತ್ರತಂಡ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ನಿರ್ಮಾಪಕರು. ಈ ಚಿತ್ರದಲ್ಲಿ ರಾಧಿಕಾ ಚೇತನ್ ಜೊತೆಗೆ ಕಿರಣ್ ರಾಜ್ ಹಾಗೂ ಲಾಸ್ಯ ನಾಗರಾಜ್ ಅವರು ಮುಖ್ಯಭೂಮಿಕೆಯಲ್ಲಿದ್ದು, ರಾಜೇಶ್ ವೇಣೂರ್‌ರವರ ನಿರ್ದೇಶನವಿದೆ.  
 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆನ್ಸಾರ್ ಹಂತದಲ್ಲಿ ಅಸತೋಮ ಸದ್ಗಮಯ - Chitratara.com
Copyright 2009 chitratara.com Reproduction is forbidden unless authorized. All rights reserved.