Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಪ್ಟೆಂಬರ್ 15 ರಮ್ಯಕೃಷ್ಣ ಹುಟ್ಟುಹಬ್ಬಕ್ಕೆ `ಶಿವಗಾಮಿ` ಚಿತ್ರದ ಲಿರಿಕಲ್ ಹಾಡು ಬಿಡುಗಡೆ
Posted date: 16 Mon, Sep 2019 10:32:52 AM

ಶ್ರೀವಿಘ್ಣೇಶ್ ಕಾರ್ತಿಕ್ ಸಿನಿಮಾಸ್ ಲಾಂಛನದಲ್ಲಿ ಜಿ.ಶ್ರೀಧರ್ ಅವರು ನಿರ್ಮಿಸಿರುವ, ಖ್ಯಾತ ನಟಿ ರಮ್ಯಕೃಷ್ಣ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ಶಿವಗಾಮಿ‘ ಚಿತ್ರದ ‘ಆಡುವೆ ನಾನು ರತಿ ಶಿವಗಾಮಿ‘ ಎಂಬ ಹಾಡಿನ ಲಿರಿಕಲ್ ಹಾಡು ಸೆಪ್ಟೆಂಬರ್ ೧೫ರ ಭಾನುವಾರ ಸಂಜೆ ಆದಿತ್ಯ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ಅನುರಾಧ ಭಟ್ ಹಾಡಿದ್ದಾರೆ. ಸೆಪ್ಟೆಂಬರ್ 15 ರಮ್ಯಕೃಷ್ಣ ಅವರ ಹುಟ್ಟುಹಬ್ಬದಂದು ಈ ಲಿರಿಕಲ್ ಹಾಡು ಬಿಡುಗಡೆಯಾಗುತ್ತಿದೆ.

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಪಡೆದಿರುವ ಮಧು ಮಿಣಕನಗುರ್ಕಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆದಿದೆ.  ಅತೀ ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ವೀರ ಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಾಲ್ ರೆಡ್ಡಿ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ರಮ್ಯಕೃಷ್ಣ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರವೀಣ್ ತೇಜ್(ಸಿಂಪಲಾಗ್ ಇನ್ನೊಂದ್ ಲವ್ ಸ್ಟೋರಿ), ಪಾಯಲ್, ರವಿಕಾಳೆ, ಮಧು(ಗೋಲಿಸೋಡ), ಅವಿನಾಶ್, ರೋಲರ್ ರಘು, ಮಧುಮಣಿ, ಮಿಮಿಕ್ರಿ ರಿತೇಶ್, ಕುರಿಬಾಂಡ್ ರಂಗ, ಸಿದ್ದರಾಜ್ ಕಲ್ಯಾಣಕರ್, ಗುರುರಾಜ ಹೊಸಕೋಟೆ, ಅನಂತವೇಲು, ಆಲಿಸಾ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಪ್ಟೆಂಬರ್ 15 ರಮ್ಯಕೃಷ್ಣ ಹುಟ್ಟುಹಬ್ಬಕ್ಕೆ `ಶಿವಗಾಮಿ` ಚಿತ್ರದ ಲಿರಿಕಲ್ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.