Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೇವಂತಿ 100 ರ ಸಂಚಿಕೆಯ ಸಂಭ್ರಮದಲ್ಲಿ ಸೇವಂತಿ ಜೊತೆ ಶೃತಿ ಸೇರಿದಾಗ
Posted date: 18 Thu, Jul 2019 – 11:35:48 AM

ಚಲನಚಿತ್ರನಟಿ ಶೃತಿಯವರನ್ನುಕಿರುತೆರೆಯಲ್ಲಿಕಾಣುವಅವಕಾಶವನ್ನುಉದಯ ಟಿವಿ ಒದಗಿಸುತ್ತಿದೆ. ಸರೆಗಮಾಇಂಡಿಯಾ ಲಿಮಿಟೆಡ್ ನಿರ್ಮಾಣದಲ್ಲಿ, ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನದಲ್ಲಿ ಪ್ರತಿದಿನ ರಾತ್ರಿ 7.30ಕ್ಕೆ ಉದಯಟಿವಿ ಯಲ್ಲಿ ಮೂಡಿಬರುತ್ತಿರುವ ಸೇವಂತಿಧಾರಾವಾಹಿಯಲ್ಲಿ ವಿಶೇಷ ಅತಿಥಿಕಲಾವಿದೆಯಾಗಿ ಭಾಗವಹಿಸುತ್ತಿರುವ ಶೃತಿಯವರು, ಇದೇ ಮೊದಲಬಾರಿಗೆಕಿರುತೆರೆಯಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.

ಸೇವಂತಿಧಾರಾವಾಹಿ ಇದೀಗ  ನೂರನೇ ಸಂಚಿಕೆಯ ಹೊಸ್ತಿಲಲ್ಲಿದ್ದು, ವೀಕ್ಷಕರ ಮನಗೆಲ್ಲುತ್ತಾ ಸಾಗಿದೆ. ಮೋಸಕ್ಕೆ ಒಳಗಾಗಿ ಜೈಲು ಸೇರಿರುವ  ಸಾಕು ತಂದೆಯನ್ನು ಬಿಡಿಸುವ ಸಲುವಾಗಿ  ಸೇವಂತಿಒಂದು ವರ್ಷದಒಪ್ಪಂದದ ಮೇರೆಗೆ ಲಾಯರ್‌ಅರ್ಜುನನನ್ನುಗುಟ್ಟಾಗಿ ಮದ್ವೆಯಾಗಿರುತ್ತಾಳೆ.

ಸೇವಂತಿಗೆ  ಪರಿಚಯಇರುವಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಶೃತಿ, ಅವಳಿದ್ದ ಆಶ್ರಮಕ್ಕೆ ಹೋದಾಗ  ಈ ಎಲ್ಲಾ ವಿಷಯವೂ ತಿಳಿಯುತ್ತದೆ. ಸೇವಂತಿಯನ್ನ ಭೇಟಿಯಾಗಲು ನಟಿ ಶೃತಿ ನೇರವಾಗಿಅರ್ಜುನ್ ಮನೆಗೆ ಬರುತ್ತಾರೆ.  ಶೃತಿಯ ಆಗಮನ ಮನೆಯವರೆಲ್ಲರಿಗೂ ಖುಷಿ ಕೊಡುತ್ತದೆ. ಅಲ್ಲೆಇರುವ ಶೃತಿಗೆ, ಅರ್ಜುನ್ ಸೇವಂತಿಯಒಪ್ಪಂದದ ಮದ್ವೆಅನ್ನೋದುಗೊತ್ತಿಲ್ಲದಿದ್ದರೂಅವರಿಬ್ಬರಒಡನಾಟವನ್ನ ಸೂಕ್ಷ್ಮವಾಗಿ ಗಮನಿಸುತ್ತಾರೆ ಹಾಗೂ ಒಂದು ಮಹತ್ವದಕಾರ್ಯವನ್ನ ಮನೆಯವರ ಸಮ್ಮುಖದಲ್ಲೆನಡೆಸಿಕೊಡುತ್ತಾರೆ. ಸೇವಂತಿಅರ್ಜುನ್ ಪಾಲಿಗೆ ಶೃತಿಅವರ ಆಗಮನ ಹೊಸ ತಿರುವು ನೀಡುತ್ತದೆ. ಆ ಮಹತ್ವದತಿರುವೇ ಈ ಸೇವಂತಿ ಧಾರಾವಾಹಿಯ ವಿಶೇಷ ಸಂಚಿಕೆಯಕುತೂಹಲ.ಸೇವಂತಿಜೊತೆ ಶೃತಿಅವರೂ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೂ ಹೊಸ ಉತ್ಸಾಹತುಂಬಲಿದೆ.
ಸೇವಂತಿಜೊತೆ ಶೃತಿ ಸೇರಿದಾಗ ವಿಶೇಷ ಸಂಚಿಕೆ ಸೋಮವಾರದಿಂದ ಶುಕ್ರವಾರರಾತ್ರಿ ೭:೩೦ಕ್ಕೆ ನಿಮ್ಮಉದಯಟಿವಿಯಲ್ಲಿಪ್ರಸಾರವಾಗುತ್ತದೆ.




Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೇವಂತಿ 100 ರ ಸಂಚಿಕೆಯ ಸಂಭ್ರಮದಲ್ಲಿ ಸೇವಂತಿ ಜೊತೆ ಶೃತಿ ಸೇರಿದಾಗ - Chitratara.com
Copyright 2009 chitratara.com Reproduction is forbidden unless authorized. All rights reserved.