Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಮೈಲ್‌ಗುರು ಕಿರುಚಿತ್ರ ಬಿಡುಗಡೆ
Posted date: 15 Mon, Oct 2018 09:08:43 AM

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿದೆ. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ಪ್ರತಿಭಾವಂತರಿಗೆ ಕಿರುಚಿತ್ರ ನಿರ್ಮಾಣ ಒಂದು ಸೂಕ್ತ ವೇದಿಕೆಯನ್ನು ಕಲ್ಪಿಸುತ್ತಿದೆ. ಈಗ ರಕ್ಷಿತ್ ಎಂಬ ಯುವ ಪ್ರತಿಭೆ ಸ್ಮೈಲ್‌ಗುರು ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ೩೧ ನಿಮಿಷ ಅವಧಿಯ ಈ ಕಿರುಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಯೂ ಟ್ಯೂಬ್ ಛಾನೆಲ್‌ನಲ್ಲಿ ಬಿಡುಗಡೆಗೊಳಿಸಿದರು. ಸ್ಮೈಲ್‌ಗುರು ಕಿರುಚಿತ್ರವನ್ನು ವೀಕ್ಷಿಸಿದ ಶಿವಣ್ಣ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೊಂದು ನಾನ್‌ಟ್ರೈಯಾಂಗಲ್ ಲವ್‌ಸ್ಟೋರಿಯಾಗಿದೆ. ಇಬ್ಬರು ಯುವಕರು ಹಾಗೂ ಒಬ್ಬ ಯುವತಿಯ ಮಧ್ಯೆ ನಡೆಯುವ ಕಥಾಹಂದರ ಈ ಕಿರು ಚಿತ್ರದಲ್ಲಿದೆ. ರೈನ್ ಎಫೆಕ್ಟ್  ಸೇರಿದಂತೆ ಚಲನಚಿತ್ರವನ್ನು ನಿರ್ಮಿಸುವಾಗ ಏನೆಲ್ಲ ಟೆಕ್ನಾಲಜಿ ಬಳಸಬೇಕೋ ಅದನ್ನೆಲ್ಲ ನಮ್ಮ ಕಿರು ಚಿತ್ರದಲ್ಲಿ  ಬಳಸಿರುವುದಾಗಿ ನಿರ್ದೇಶಕ ರಕ್ಷಿತ್ ಹೇಳಿದ್ದಾರೆ. ಬೆಂಗಳೂರು, ಗೋವಾ ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಸಲಾಗಿರುವ ಈ ಕಿರುಚಿತ್ರದ ಟ್ರೈಲರನ್ನು ೩ ಲಕ್ಷ ಜನ ವೀಕ್ಷಿಸಿರುವುದು ಕೂಡ ಒಂದು ದಾಖಲೆಯಾಗಿದೆ. ಅಲ್ಲದೆ ಈ ಕಿರುಚಿತ್ರದ ಮುಹೂರ್ತವನ್ನು ಕೂಡ ಗಣ್ಯರ ಸಮ್ಮುಖದಲ್ಲಿ  ಅದ್ದೂರಿಯಾಗಿಯೇ ನೆರವೇರಿಸಲಾಗಿತ್ತು. ಗಿರೀಶ್ ಪ್ರೇಂ ಪ್ರೊಡಕ್ಷನ್ ಲಾಂಛನದಲ್ಲಿ ಗಿರೀಶ್ ಪ್ರೇಮ್ ಹಾಗೂ ಪ್ರತೀಕ್ ಜೈನ್ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ವಿಕಾಸ್ ವಸಿಷ್ಠ ಅವರ ಹಿನ್ನೆಲೆ ಸಂಗೀತ, ಸತ್ಯ ಅವರ ಕ್ಯಾಮೆರಾ ವರ್ಕ್, ಮಹೇಶ್ ಎಸ್. ಅವರ ಸಂಕಲನ, ರಕ್ಷಿತ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಈ ಚಿತ್ರಕ್ಕಿದೆ. ರಕ್ಷಿತ್, ಮೇಘ ಶೇಣೈ, ಮೈಕೋ ಮಂಜು, ಸುಜೀತ್ ಸಿದ್ದಾರ್ಥ, ರಾಂಪ್ರಕಾಶ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಮೈಲ್‌ಗುರು ಕಿರುಚಿತ್ರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.