Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಫ್ತಾ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 20 Thu, Jun 2019 09:08:47 AM

ಮೈತ್ರಿ ಪ್ರೊಡಕ್ಷನ್ ಲಾಂಛನದಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಪಿಕೆಟ್ ನೀಡಿದ್ದು ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನದ. ಸೂರಿ ಸಿನಿಟೆಕ್- ಛಾಯಾಗ್ರಹಣ, ಸಂಗೀತ - ವಿಜಿ ಯಾರ್ಡ್ಲಿ, ಹಿನ್ನೆಲೆ ಸಂಗೀತ - ಗೌತಮ್ ಶ್ರೀವತ್ಸ, ಸಂಕಲನ -ವೆಂಕಿ ಯು.ಡಿ.ವಿ, ಸಹನಿರ್ದೇಶನ - ಕುಮಾರ್ ಟಿ ಗೌಡ ಬಸವರಾಜ್, ಸಾಹಸ - ರಾಕಿ ರಮೇಶ್, ನೃತ್ಯ - ಜೈ ನಿರ್ಮಾಣ ನಿರ್ವಹಣೆ - ಅಚ್ಯುತ್‌ರಾವ್, ದಶಾವರ ಚಂದ್ರು. ಈ ಚಿತ್ರವು ಸಂಪೂರ್ಣ ವಾಣಿಜ್ಯಾತ್ಮಕ ಮನರಂಜನೆಯ ಚಿತ್ರವಾಗಿದ್ದು ಚಿತ್ರಕಥೆಯು ಭೂಗತ ಜಗತ್ತಿನ ಹಫ್ತಾವಸೂಲಿ ಮತ್ತು ಸುಫಾರಿ ಕಿಲ್ಲರ್‌ಗಳ ಅಂಶಗಳನ್ನು ಒಳಗೊಂಡಿರುತ್ತದೆ. ತಾರಾಗಣದಲ್ಲಿ - ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ,  ರಾಘವ್‌ನಾಗ್, ಸೌಮ್ಯ ತತೀರ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರಿದ್ದಾರೆ.
 


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಫ್ತಾ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.