Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಾರರ್ ಕಥೆಯ ನಂ ೯ ಹಿಲ್ಟನ್ ಹೌಸ್ ನಾಳೆಯಿಂದ
Posted date: 16 Thu, Nov 2017 08:31:46 AM
ಆರ್ ವಿ ಫಿಲ್ಮ್ಸ್ ಅಡಿಯಲ್ಲಿ ಕೆಲವು ಯಶಸ್ವಿ ಸಿನಿಮಾಗಳಾದ ಓ ಗುಲಾಬಿಯೇ, ಪಲ್ಲಕ್ಕಿ ಹಾಗೂ ಯುವ ನಿರ್ದೇಶಕ ನರೇಂದ್ರ ಬಾಬು ಅವರ ಹಾರರ್ ಕತೆಯುಳ್ಳ ಸಿನಿಮಾ ’ನಂ ೯ ಹಿಲ್ಟನ್ ಹೌಸ್’  ನಾಳೆಯಿಂದ   ತೆರೆ ಕಾಣುತ್ತಿದೆ. ಒಂದು ಮೊಬೈಲ್ ಅಲ್ಲಿ ಮಿಲ್ ಕಾಲ್ ಇಂದ ಆಗುವ ಅನಾಹುತ ಈ ಚಿತ್ರದಲ್ಲಿ ಕಾಣಬಹುದು. ನಿರ್ದೇಶಕ ನರೇಂದ್ರ ಬಾಬು ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. 
 
ಇದು ಸಿನಿಮಾ ಒಳಗೆ ನಡೆಯುವ ಸಿನಿಮಾ. ಮಾಜಿ ಬಾಲ ನಟ ಕಿರಣ್ ಈ ಚಿತ್ರದೊಳಗೆ ನಿರ್ದೇಶಕನ ಪಾತ್ರ ಮಾಡಿದ್ದಾರೆ. ದಿವ್ಯ ರಾವ್, ವಂದನ ಬೇಬಿ ಪ್ರಜ್ಞಾ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಒಂದು ಹಾಡಿಗೆ ಎ ಟಿ ರವೀಶ್ ಲಕ್ಷ್ಮಿ ದಿನೇಷ್ ಅವರ ಗೀತೆಗೆ ಸಂಗೀತ ನೀಡಿದ್ದಾರೆ, ಗಿರಿಧರ್ ದಿವಾನ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ, ಸಂತೋಷ್ ಛಾಯಾಗ್ರಹಣ, ಕೆ. ಗಿರೀಷ್ ಕುಮಾರ್ ಸಂಕಲನ ಇರುವ ಈ ಚಿತ್ರವನ್ನು ಸಿ ವೆಂಕಟೇಶ್ ಹಾಗೂ ಜಿ ಶಶಿಕಾಂತ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾರರ್ ಕಥೆಯ ನಂ ೯ ಹಿಲ್ಟನ್ ಹೌಸ್ ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.