Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಾರರ್ ಗಾಯಿತ್ರಿ ಸದ್ಯದಲ್ಲೇ ತೆರೆಗೆ
Posted date: 14 Thu, Sep 2017 10:08:56 AM
ಸ್ಯಾಂಡಲ್ ವುಡ್ ನಲ್ಲಿ ಈಗ ಮತ್ತೊಂದು ಹಾರರ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಗಾಯಿತ್ರಿ ಎಂಬ ಹೆಸರಿನ ಈ ಚಿತ್ರದಲ್ಲಿ ಮನೆಯೊಂದರಲ್ಲಿ ನಡೆರಯುವ ವಿಚಿತ್ರ ಘಟನೆಗಳನ್ನು ಹಾರರ್ ಅಂಶಗಳೊಂದಿಗೆ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ. ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋದಾಗ ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಅಲ್ಲದೆ, ಅಲ್ಲಿ ನಡೆಯುವ ನಿಗೂಢ ಘಟನೆಗಳಿಗೆ ಕಾರಣವೇನು ಎಂಬುದಕ್ಕೆ ಗಾಯಿತ್ರಿ ಚಿತ್ರದಲ್ಲಿ ಹೇಳಲಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆಗೂ ಮುನ್ನವೇ ತಮಿಳಿನ ರಿಮೇಕ್ ರೈಟ್ಸ್ ಒಳ್ಳೆಯ ಬೆಲೆಗೆ ಮಾರಾಟವಾಗಿದ್ದು ಈ ತಿಂಗಳು ಕರ್ನಾಟಕ ಮಾತ್ರವಲ್ಲದೆ, ಮಲೇಶಿಯಾ, ಸಿಂಗಾಪುರ, ಯುರೋಪ್ ನಲ್ಲಿ ಕೂಡಾ ಗಾಯಿತ್ರಿ ಬಿಡುಗಡೆಯಾಗುತ್ತಿದೆ.
 
ಕುಮಾರ್ ಮೂವೀಸ್ ಲಾಂಛನದಲ್ಲಿ ಭಾರತಿಗೌಡ, ವಿ. ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸತ್ಯ ಸಾಮ್ರಾಟ್ ಕಥೆ, ಚಿತ್ರಕತೆ, ಬರೆದು ನಿರ್ದೇಶನ ಮಾಡಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಸಿ. ರವಿ ಸಂಗೀತ, ಪ್ರಸಾದ್ ಸಂಕಲನ, ಜಗ್ಗು ನೃತ್ಯ, ಸತ್ಯ ಸಾಹಿತ್ಯ, ಮೋಹನ್ ಸುರೇಶ್ ಕಲಾನಿರ್ದೇಶನವಿದೆ. ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಮುಂತಾದವರ ತಾರಾಗಣವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಾರರ್ ಗಾಯಿತ್ರಿ ಸದ್ಯದಲ್ಲೇ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.