ಬದಲಾಗಿದೆ ಸಮಯ ಬದಲಾಗ್ತಿದೆ ಉದಯ ಎಂಬ ಸಾರದ ಮೂಲಕ ಮನರಂಜನೆ ನೀಡುತ್ತಿರುವ ಉದಯ ಟಿವಿ ಸದಾ ಹೊಸತನದದಾರಿಯಲ್ಲಿ ಸಾಗುತ್ತ ಬಂದಿದೆ. ಇನ್ಮುಂದೆ ಸೇವಂತಿ ಪಾತ್ರವನ್ನ ಖ್ಯಾತ ಕಿರುತೆರೆ ನಟಿ ದೀಪಿಕಾ ಅವರು ನಿರ್ವಹಿಸಲಿದ್ದಾರೆ. ಈ ಮೂಲಕ ಶಿಶಿರ್ ಹಾಗೂ ದೀಪಿಕಾ ಜೋಡಿಅರ್ಜುನ್ ಮತ್ತು ಸೇವಂತಿ ಪಾತ್ರದ ಮೂಲಕ ಕಮಾಲ್ ಮಾಡಲಿದ್ದಾರೆ.
ಈಗಾಗಲೇ ನಟಿ ಪ್ರಿಯಾಂಕ ಉಪೇಂದ್ರಅವರು ಸೇವಂತಿ ಮನೆಗೆ ಬಂದು ಹೋದ ನಂತರ ಮನೆಯಲ್ಲಿ ಮತ್ತೆ ಕಳೆ ಬಂದಿದೆ ಎಂದುಕಲ್ಪನಾ ಖುಷಿಯಾಗಿರುತ್ತಾಳೆ. ಆದರೆ ಪ್ರಿಯಾ ಅಶ್ವಿನ್ ಮದುವೆಯನ್ನ ಮಾಡಿಯೇ ಸಿದ್ಧ ಅನ್ನುತ್ತಿರೋಅಜ್ಜಿಯ ಜೊತೆ, ಅರ್ಜುನ್ ಈ ವಿ?ಯವಾಗಿ ಜಗಳವಾಡುತ್ತಾನೆ. ಒಂದಾಗಿದ್ದ ಮನೆಯಲ್ಲಿ ಈಗ ಎರಡು ಒಲೆ ಉರಿಯುವಂತಾಗಿದೆ. ಅರ್ಜುನನ್ನ ಸಮಾಧಾನಿಸಲು ಬರುವ ಅಮ್ಮನ ಮಾತನ್ನೂ ಕೇಳದೆ ತನ್ನ ಹಠದಿಂದ ಮನೆಯವರಿಂದದೂರಇರುತ್ತಾನೆ. ಹಾಗೂ ಸೇವಂತಿ ಬಳಿ ನೀನು ಯಾರೊಡನೆಯೂ ಮಾತಾನಾಡಬಾರದೆಂದುಆಜ್ಞೆ ಮಾಡುತ್ತಾನೆ. ಇದರ ಪರಿಣಾಮವಾಗಿ ಈಗಒಂದಾಗಿದ್ದ ಮನಸುಗಳು ಕವಲೊಡೆದಿವೆ. ಹೀಗಿರುವಾಗ ಮುಂದೆ ಅರ್ಜುನ್ ಸೇವಂತಿ ಆಸೆಯಂತೆ ಅಶ್ವಿನ್ ಪೂಜಾ ಮದುವೆಯನ್ನ ಮನೆಯವರ ವಿರೋಧದ ನಡುವೆಯೂ ಹೇಗೆ ಮಾಡುತ್ತಾರೆಂಬ ಕುತೂಹಲ ಮುಂದಿನ ಸಂಚಿಕೆಗಳಲ್ಲಿದೆ. ಸರೆಗಮಾ ಲಿಮಿಟೆಡ್ ಈ ಧಾರಾವಾಹಿಯ ನಿರ್ಮಾಣದಜವಾಬ್ದಾರಿ ಹೊತ್ತಿದ್ದು, ನಾಗಾರಾಜ್‌ಉಪ್ಪುಂದ ನಿರ್ದೇಶನದರುವಾರಿಯಾಗಿದ್ದಾರೆ.
ಹೊಸ ರೂಪದಲ್ಲಿ ಬಂದಿರುವ ಸೇವಂತಿ ಅದೇ ಹಳೆಯ ಕ್ಯಾರೆಕ್ಟರ್‌ಆಗಿದ್ರೂ ಬುದ್ಧಿವಂತಿಕೆಯಲ್ಲಿ ಮತ್ತಷ್ಟು ಬಲಿಷ್ಠ ಹೊಂದಿ ಅರ್ಜುನ್‌ನಿಗೆ ಸಾಥ್ ಕೊಟ್ಟು ಅವನ ಮನೆಯಲ್ಲಿರುವವರನ್ನು ಒಂದು ಸೇರಿಸಿ ಒಗ್ಗಟ್ಟಿನಕುಟುಂಬಕ್ಕೆ ಮಾದರಿಯಾಗಲು ಹೊರಡುತ್ತಾಳೆ.
ಇನ್ಮುಂದೆ ಹೊಸ ರೂಪದಲ್ಲಿ ಸೇವಂತಿ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ ೭:೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.