Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಸಬರ ಸಿಂಹಸೇನಾ
Posted date: 17 Wed, May 2017 08:38:34 AM

ಶ್ರೀ.ವೆಂಕಟಾದ್ರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ಸುರೇಶ್‌ರೆಡ್ಡಿ ದಮ್ಮೂರು, ನರೇಂದ್ರ ಚೌದರಿ ಶಂಕರ ಬಂಡೆ ನಿರ್ಮಿಸುತ್ತಿರುವ ಸಿಂಹಸೇನಾ ಚಿತ್ರವನ್ನು ಈ ಹಿಂದೆ ಸೂರಿಗ್ಯಾಂಗ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಎಸ್ ರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಹೊಸ ಚಿತ್ರದಲ್ಲಿ ಸೆಂಟಿಮೆಂಟ್, ಕಾಮಿಡಿ ಹಾಗೂ ಲವ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಹಿಳೆಯರ ಮೇಲೆ ಪೂಜ್ಯಭಾವನೆ ಬರುವಂತಹ ಕಥಾನಕವಿದೆ.
ಬಳ್ಳಾರಿ ಸಂಡೂರು ಸುತ್ತ ಮುತ್ತ ಚಿತ್ರೀಕರಿಸಲಾಗಿರುವ ಈ ಚಿತ್ರದ ಪ್ರಥಮ ಪ್ರತಿ ಸದ್ಯದಲ್ಲೇ ಬರಲಿದೆ, ರಂಗಭೂಮಿ ಹಿನ್ನೆಲೆ ಹೊಂದಿರುವ ಹಾಗೂ ಆರುಂಧತಿ ಧಾರಾವಾಹಿಯಲ್ಲಿ ನಟಿಸಿರುವ ಕುಲದೀಪಕ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ನಾಗಕುದ್ರಿ ಛಾಯಾಗ್ರಹಣ, ವಿನುಮನಸ್ಸು ಸಂಗೀತ, ಜೋನ್ಸ್ ಸಾಹಸ, ಬಾಲ ನೃತ್ಯನಿರ್ದೇಶನ, ವಿನಯ್ ಕುಮಾರ್ ಕೂರ್ಗ್ ಸಂಕಲನ, ರವಿ, ಶ್ರೀಮಾರುತಿ, ಧನಂಜಯ ಸಹನಿರ್ದೇಶನ, ರೆಮೋ, ಮನ್ವರ್ಷಿ, ಉದಯ್‌ಕುಮಾರ್, ಗಿರೀಶ್‌ರಾಮಾಂಜನೇಯ ಸಾಹಿತ್ಯವಿದೆ. ಕುಲದೀಪಕ್, ಮನಸ್ವಿನಿ, ಸಂತೋಷ್ ದಾವಣಗೆರೆ, ಬಸವರಾಜ್‌ಕಟ್ಟಿ, ಅನುಷಾ, ಕೃತಿ, ಸುನೀಲ್, ಸುರೇಶ್‌ರೆಡ್ಡಿ, ಮೌನೇಶ್, ಕೃಷ್ಣ ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಸಬರ ಸಿಂಹಸೇನಾ - Chitratara.com
Copyright 2009 chitratara.com Reproduction is forbidden unless authorized. All rights reserved.