Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೋಳಿ ಹಬ್ಬ ದಲ್ಲಿ ಬ್ರಹ್ಮಾಸ್ತ್ರ ತಂಡ
Posted date: 01 Thu, Mar 2018 06:47:52 PM
ಬಣ್ಣದ ಹಬ್ಬ ಹೋಳಿಗಾಗಿ ಉದಯಟಿವಿಯಲ್ಲಿಕಲರ್ ಫುಲ್ ಮನರಂಜನೆ. ಈಗಾಗಲೇ ಕನ್ನಡದ ಹುಡುಗ ಮತ್ತುತೆಲುಗು ಹುಡುಗಿಯ ವಿಭಿನ್ನ ಪ್ರೇಮಕಥೆಯನ್ನ ವೀಕ್ಷಕರ ಮುಂದಿಟ್ಟುಜನಮೆಚ್ಚುಗೆ ಗಳಿಸಿರುವ ಬ್ರಹ್ಮಾಸ್ತ್ರಧಾರಾವಾಹಿಯಲ್ಲಿ ಬಣ್ಣದರಂಗು ಮೂಡುತ್ತಿದೆ. ಪ್ರೀತಿಯನ್ನಆರಾಧಿಸೋಕುಟುಂಬ ಒಂದೆಡೆಯಾದರೆ ಪ್ರೀತಿಯನ್ನದ್ವೇಷಿಸೋ ಕುಟುಂಬ ಮತ್ತೊಂದೆಡೆ. ಹೀಗಾಗಿ ಲಾಂಗು ಮಚ್ಚು ಜಗಳದ ನಡುವೆ ಈಗಷ್ಟೇ ಕಥೆಯಲ್ಲಿ ನಾಯಕ ಸಂತು ಮೇಲೆ ನಾಯಕಿ ಶಿವರಂಜಿನಿಗೆ ಪ್ರೀತಿ ಮೂಡಿದೆ. ಈ ಪ್ರೀತಿಗೆ ಬಣ್ಣದ ಲೇಪನ ಕೊಟ್ಟುಇನ್ನಷ್ಟುರಂಗು ನೀಡುತ್ತಿದೆ ಬ್ರಹ್ಮಾಸ್ತ್ರತಂಡ. 
ಊರ ಹೋಳಿ ಆಚರಣೆಯಲ್ಲಿ ನಾಯಕನಕುಟುಂಬ ಸೇರುವ ನಿರ್ಧಾರ ಮಾಡಿದಾಗಅದೇ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಶಿವರಂಜಿನಿಗೆ ತಾನೂ ಹಬ್ಬಆಡಬೇಕೆಂಬ ಮನಸ್ಸಾಗುತ್ತದೆ. ಅವಳಿಗೆ ನಿರಾಸೆ ಮಾಡಲುಇಷ್ಟಪಡದ ಸಂತು ಶಿವರಂಜಿನಿಯನ್ನ ಕದ್ದು ಮುಚ್ಚಿಕರೆದುಕೊಂಡು ಬರುತ್ತಾನೆ. ಆದರೆ ಅವಳನ್ನ ನೋಡಿದ ಅಲಮೇಲಮ್ಮನಕಡೆಯವರು ಬಣ್ಣದ ಓಕುಳಿಯನ್ನ ರಕ್ತದ ಓಕುಳಿ ಮಾಡುವುದಾಗಿಆಕ್ರಮಣ ಮಾಡುತ್ತಾರೆ. ಈ ನಡುವೆ ವೀರಪ್ರತಾಪರೆಡ್ಡಿಗೆತನ್ನ ಅಕ್ಕನ ಮಗಳು ಕೃಷ್ಣವೇಣಿ ಮನೆಯಲ್ಲೇ ಶಿವರಂಜಿನಿ ಇರೋ ಸತ್ಯಗೊತ್ತಾಗುತ್ತಾಕಾದುನೋಡಬೇಕು.
ಕಥೆಗೆಅನುಗುಣವಾಗಿ ಚಿತ್ರೀಕರಿಸಿ ಎಲ್ಲೂ ಬೋರ್ ಹೊಡೆಯದಂತೆ ಪ್ರತಿ ಫ್ರೇಮ್ ಸಹ ಕಲರ್ ಫುಲ್ ಆಗಿ ಚಿತ್ರೀಕರಿಸಿರುವ ತೃಪ್ತಿಯಲ್ಲಿದ್ದಾರೆ ನಿರ್ದೇಶಕತಿಲಕ್‌ಅವರು. ರವಿ ಆರ್‌ಗರಣಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬ್ರಹ್ಮಾಸ್ತ್ರಧಾರಾವಾಹಿಯ ಹೋಳಿ ಸ್ಪೆಷಲ್ ಎಪಿಸೋಡ್ ಶುಕ್ರವಾರ ಮತ್ತು ಸೋಮವಾರರಾತ್ರಿ ೮ಕ್ಕೆ ನಿಮ್ಮಉದಯಟಿವಿಯಲ್ಲಿ ಪ್ರಸಾರವಾಗಲಿದೆ.

ಉದಯ ಗೋಲ್ಡನ್ ಮಂಥ್

ಕನ್ನಡ ನಾಡಿನ ಹಿರಿಯ ಮನರಂಜನಾ ವಾಹಿನಿಯಾದಉದಯ ಟಿವಿ, ಮಾರ್ಚ್ ತಿಂಗಳಲ್ಲಿ ವೀಕ್ಷಕರಿಗೆಚಿನ್ನದ ಮಳೆ ಸುರಿಸಲು ಸಿದ್ಧವಾಗಿದೆ! ಮಾರ್ಚ್‌ಇಡಿಯ ತಿಂಗಳು, ಉದಯಟಿವಿಯಧಾರಾವಾಹಿಯನ್ನು ವೀಕ್ಷಿಸುವ ಅದೃಷ್ಟಶಾಲಿಗಳಿಗೆ, ಚಿನ್ನದ ಬಹುಮಾನದೊರಕಲಿದೆ. ಪ್ರತೀ ಸೋಮವಾರದಿಂದ ಶುಕ್ರವಾರ, ಮಾರ್ಚ್‌ಒಂದರಿಂದ ಮೂವತ್ತನೇತಾರೀಕಿನವರೆಗೆಉದಯ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ, ಅಂದಿನ ಕಂತನ್ನು ಆಧರಿಸಿದ ಒಂದು ಪ್ರಶ್ನೆಯನ್ನು ಕೇಳಲಾಗುತ್ತದೆ. ಸರಿಯಾದಉತ್ತರಕೊಡುವಐದು ಮಂದಿ ಅದೃಷ್ಟಶಾಲಿಗಳನ್ನು ನಿತ್ಯವೂಆರಿಸಲಾಗುತ್ತದೆ. ಪ್ರತಿ ವಿಜೇತರಿಗೂ ಮೂರು ಸಾವಿರರೂಪಾಯಿ ಬೆಲೆ ಬಾಳುವ ಚಿನ್ನದಗಿಫ್ಟ್ ವೋಚರ್‌ದೊರೆಯಲಿದೆ. 

ಜೋಜೋಲಾಲಿ, ಅವಳು, ಕಾವೇರಿ, ನಂದಿನಿ, ಜೀವನದಿ, ಮಾನಸ ಸರೋವರ, ದೊಡ್ಮನೆ ಸೊಸೆ ಮೊದಲಾದ ಸದಭಿರುಚಿಯ ಧಾರಾವಾಹಿಗಳು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದುಜನಮೆಚ್ಚುಗೆ ಗಳಿಸಿವೆ. ಜನರುತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡುವ ಮೂಲಕ ಇದೀಗ ಚಿನ್ನವನ್ನುಕೂಡಗೆಲ್ಲಬಹುದಾಗಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೋಳಿ ಹಬ್ಬ ದಲ್ಲಿ ಬ್ರಹ್ಮಾಸ್ತ್ರ ತಂಡ - Chitratara.com
Copyright 2009 chitratara.com Reproduction is forbidden unless authorized. All rights reserved.