Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹ್ಯಾಂಗೋವರ್ ರಾಜ್ಯಾದ್ಯಂತ ನಾಳೆಯಿಂದ ಬಿಡುಗಡೆ
Posted date: 13 Thu, Jun 2019 – 08:51:49 AM

ರಮಣಿ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್‌ರವರ ನಿರ್ಮಾಣದಲ್ಲಿ ತಯಾರಾದ ಹ್ಯಾಂಗೋವರ್ ಇದೇ ಜೂನ್ 14 ರಂದು ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಸ್ಪೆನ್ಸ್-ಥ್ರಿಲ್ಲರ್ ಅಂಶವನ್ನ ಇಷ್ಟಪಡುವ ಚಿತ್ರರಸಿಕರಿಗೆ ಹ್ಯಾಂಗೋವರ್ ಖಂಡಿತ ಖಷಿಕೊಡುವುದರಲ್ಲಿ ಬೇರೆ ಸಂಶಯವೇ ಇಲ್ಲ.. ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ನಿಮ್ಮನ್ನು ಥ್ರಿಲ್ ಮಾಡತ್ತದೆ.. ಎಂಬುದರಲ್ಲಿ ಎರಡನೇ ಮಾತೇ ಇಲ್ಲ.. ಇದು ಚಿತ್ರತಂಡದವರ ಭರವಸೆ ಮತ್ತು ನಂಬಿಕೆಯ ಮಾತು.

ಚಿತ್ರದಲ್ಲಿ ಸೂರ್ಯ ಎಂಬ ಪಾತ್ರದ ಸುತ್ತೂ ಚಂದ್ರ ಮತ್ತು ರಾಹುಲ್ ಎಂಬ ಎರಡು ಪಾತ್ರಗಳು ಸುತ್ತಾಡುತ್ತಿರುತ್ತದೆ.. ಇವರೊಂದಿಗೆ ಭೂಮಿ, ಮಂಗಳ, ಚೇತನ ಎಂಬ ಮೂರು ಹೆಣ್ಣು ಮಾತ್ರಗಳೂ ಇವೆ. ಒಂದು ಬೆಳಗಿನ ಜಾವ ಮಂಗಳಾಳ ಕೊಲೆಯಿಂದ ಎಲ್ಲಾ ಮಾತ್ರಗಳೂ ಗಿರಕಿ ಹೊಡೆಯುತ್ತವೆ. ಇಲ್ಲಿ ಮತ್ತೊಂದು ಪಾತ್ರ ಎಂಟ್ರಿ ಇನ್ವೆಸ್ಟಿಗೇಷನ್ ಆಫೀಸರ್ ರಂಜಿತ್.. ಹೀಗೆ ಉಲ್ಟಂ-ಪಲ್ಟ ಚಿತ್ರಕಥೆಯಲ್ಲಿ ಶುರುವಾದ ಕಥೆ ಕೊನೆಗೆ ಕೊಲೆಗಾರ ಯಾರು?? ಎಂಬುದು ಪತ್ತೆ ಯಾಗುತ್ತದೆ.. ಇದೇ ಹ್ಯಾಂಗೋವರ್.

ಹ್ಯಾಂಗೋವರ್‌ನಲ್ಲಿ ಎರಡು ಹಾಡುಗಳಿವೆ ಒಂದು ನೀತು ಹೆಜ್ಜೆ ಹಾಕಿದ ನಾನೇ ರುಕ್ಕು ಇನ್ನೋಂದು ಹುಡುಗರು-ಹುಡುಗಿಯರು ಜಾಲೀ ಮಾಡಿದ ದಿನವೂ ಒಂದು ರೋಚಕ..  ಹಾಡು, ಇದರ ಜೊತೆಗೆ ಒಂದು ಥೀಮ್ ಸಾಂಗ್ ಇದೆ.. ಅದು ಥಿಯೇಟರ್‌ನಲ್ಲೇ ನೋಡ್ಬೇಕು. ಇದರ ಕ್ರೆಡಿಟ್ಸ್ ಸಂಗೀತ ನಿರ್ದೇಶಕ ವೀರ್‌ಸಮರ್ಥ್‌ರವರಿಗೆ ಮತ್ತು ನೃತ್ಯ ನಿರ್ದೇಶಕ ಕಲೈರವರಿಗೆ.

ಎಲ್ಲಾ ಪಾತ್ರಗಳು ಚಿತ್ರದಲ್ಲಿ ಮಾತಾಡ್ತಿವೆ ಅಂದ್ರೆ ಅದು ಗಣೇಶ್ ರಾಣಿಬೆನ್ನೂರುರವರ ಪೆನ್ನಿನ ಚಳಕ ಮತ್ತು ಕರೆಟ್ಟಾಗಿ ಕಟ್ ಮಾಡಿದ ಎಡಿಟರ್ ಕಿರಣ್ ಕುಮಾರ್.. ಸುಂದರವಾಗಿ ತೋರಿಸಿದ ಯೋಗಿ. ಕೊನೆಗೆ ಸೂತ್ರಧಾರಿ ನಿರ್ದೇಶಕ ವಿಠಲ್ ಭಟ್ ಮತ್ತು ತಂಡ.


   

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹ್ಯಾಂಗೋವರ್ ರಾಜ್ಯಾದ್ಯಂತ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.