Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಕಾಶ ಸೂರ್ಯ ಚಂದ್ರ ಭೂಮಿ ಚಿತ್ರಕ್ಕೆ ಯು ಸರ್ಟಿಫಿಕೇಟ್
Posted date: 28 Thu, Sep 2017 08:45:55 AM
ಎಲ್‌ಎಂಎಸ್ ಪ್ರೊಡಕ್ಷನ್ ಲಾಂಛನದಡಿಯಲ್ಲಿ ಮೂಡಿ ಬಂದಿರುವ, ಎಸ್ ಎಲ್ ಮಂಜುನಾಥ್ ನಿರ್ದೇಶನದ ‘ಆಕಾಶ ಸೂರ್ಯ ಚಂದ್ರ ಭೂಮಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯುಸರ್ಟಿಫಿಕೇಟ್ ಸಿಕ್ಕಿದೆ.
ಪ್ರಕೃತಿ ಪ್ರತಿ ಜೀವಿಯ ಅನಿವಾರ್ಯತೆ. ಆಕಾಶ, ಸೂರ್ಯ, ಚಂದ್ರ, ಭೂಮಿ,  ಈ ನಾಲ್ಕು ಇಲ್ಲದೇ ಹೋದರೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ. ಇವುಗಳೆಲ್ಲ ನಮಗೆ ಬೇಕು ಎಂದರೆ ನಾವು ಹೇಗೆ ಬದುಕಬೇಕು ಎಂಬುದನ್ನು ಚಿತ್ರದಲ್ಲಿ ನಿರ್ದೇಶಕರು ಪರಿಣಾಮಕಾರಿಯಾಗಿ ಹೇಳಿದ್ದಾರಂತೆ.
ಚಿತ್ರದಲ್ಲಿ ಇರುವುದು ಬರೀ ಎರಡು ಪಾತ್ರಗಳು. ಆದರೆ ಆ ಎರಡೂ ಪಾತ್ರಗಳು ಮಾತನಾಡುವುದಿಲ್ಲ. ಪರಸ್ಪರ ಭೇಟಿ ಆಗುವುದಿಲ್ಲ. ಇಲ್ಲಿ ಪ್ರಕೃತಿಯೇ ಎಲ್ಲವನ್ನೂ ಹೇಳುತ್ತದೆ ಎಂಬುದು ಇಡೀ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. ಇ ಚಿತ್ರದ ಎರಡು ಪಾತ್ರಗಳಲ್ಲಿ ಲಕ್ಷ್ಮಣ್ ಮತ್ತು ಡಿ.ಕೆ. ಗೋವಿಂದ್ ನಟಿಸಿದ್ದಾರೆ.
ರಾಜ್ ಭಾಸ್ಕರ್ ಚಿತ್ರಕ್ಕೆ ಎರಡು ಹಾಡುಗಳನ್ನು ಸಂಯೋಜಿಸಿದ್ದಾರೆ. ನಿರ್ದೇಶಕರೇ ಹಾಡುಗಳನ್ನು ಬರೆದಿದ್ದು, ಸಚಿನ್ ಮತ್ತು ಪ್ರಿಯಾ ಹಾಡಿದ್ದಾರೆ. ವಿಜಯ್ ಭಾಸ್ಕರ್, ಡಿ.ಕೆ. ಗೋವಿಂದ್, ಶಂಕರ್ ಬಾಬು, ಆಟೋ ಶಿವರಾಜ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಸ್ಥಿರಚಿತ್ರ ಛಾಯಾಗ್ರಾಹಕ ಮಾರುತಿ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಮಡಿಕೇರಿ, ದುಬಾರೆ ಅರಣ್ಯ, ಮಿನಿ ಅಬ್ಬೆ ಫಾಲ್ಸ್, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ಸೆನ್ಸಾರ್ ಮಂಡಳಿಯಿಂದ ಯು ಸಿರ್ಟಿಫಿಕೇಟ್ ಸಿಕ್ಕ ಸಂತಸದಲ್ಲಿರೋ ಚಿತ್ರತಂಡ ಚಿತ್ರದ ಬಿಡುಗಡೆಗೆ ಮುಹೂರ್ತ ಹುಡುಕುತ್ತಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಕಾಶ ಸೂರ್ಯ ಚಂದ್ರ ಭೂಮಿ ಚಿತ್ರಕ್ಕೆ ಯು ಸರ್ಟಿಫಿಕೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.