Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಡುವ ಗೊಂಬೆ` ನಾಳೆಯಿಂದ ತೆರೆಗೆ
Posted date: 03 Thu, Jan 2019 09:36:36 AM

ಕಸ್ತೂರಿ ನಿವಾಸ ಕ್ರಿಯೇಷನ್ಸ್ ಲಾಂಛನದಲ್ಲಿ ಎ.ಶಿವಪ್ಪ ಹಾಗೂ ಕೆ.ವೇಣುಗೋಪಾಲ್ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ದೊರೆ - ಭಗವಾನ್ ನಿರ್ದೇಶನದ ‘ಆಡುವ ಗೊಂಬೆ‘ ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
೨೨ವರ್ಷಗಳ ನಂತರ ದೊರೆ-ಭಗವಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಆಡುವ ಗೊಂಬೆ‘ ದೊರೆ - ಭಗವಾನ್ ಅವರ  ನಿರ್ದೇಶನದ ೫೦ನೇ ಚಿತ್ರ.. ಹೇಮಂತ್ ಕುಮಾರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಜಬೇಜ್ ಕೆ ಗಣೇಶ್ ಅವರ ಛಾಯಾಗ್ರಹಣವಿದೆ. ಶಿವಪ್ರಸಾದ್ ಯಾದವ್ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಸ್.ಸತೀಶ್. ಅನಂತನಾಗ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ರಿಶಿತಾ ಮಲ್ನಾಡ್, ನಿರೋಷ ಶೆಟ್ಟಿ, ದಿಶಾ ಕೃಷ್ಣಯ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಡುವ ಗೊಂಬೆ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.