Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೌಡ್ರು ಹೋಟೆಲ್ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 17 Mon, Apr 2017 10:54:24 PM

 ಒಂದು ಸುಂದರ ಭಾವನಾತ್ಮಕ ಕಥೆಯಲ್ಲಿ ತಾತ, ಮೊಮ್ಮಗನ ಬಾಂಧವ್ಯವನ್ನು ಹೇಳಲು ಹೊರಟಿರುವ ಚಿತ್ರ ‘ಗೌಡ್ರು ಹೊಟೇಲ್. ‘ವಿಷ್ಣುವರ್ಧನ  ಚಿತ್ರ ನಿರ್ದೇಶನ ಮಾಡಿದ್ದ, ಪಿ.ಕುಮಾರ್ ‘ಜೈಲಲಿತಾ  ಚಿತ್ರದ ಬಳಿಕ ಎರಡು ವರ್ಷಗಳ ಬಿಡುವಿನ ನಂತರ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.

ಯುಕೆನಲ್ಲ್ಲಿ ಇಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಇವರಿಗೆ ಜತೆಯಾಗಿ ‘ಶಿವಲಿಂಗ‘ ಚಿತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ವೇದಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಾತನ ಪಾತ್ರದಲ್ಲಿ ಪ್ರಕಾಶ್‌ರೈ ಅಭಿನಯಿಸುತ್ತಿದ್ದಾರೆ. ಕವಿರಾಜ್ ಸಾಹಿತ್ಯದ ಐದು ಗೀತೆಗಳಿಗೆ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಸಂಗೀತ ಸಂಯೋಜಿಸುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರ ಜೊತೆಯಲ್ಲಿ ತೆಲುಗು ಸ್ಟಾರ್ ಛಾಯಗ್ರಾಹಕ ಶಿವ ಕೂಡ ತಂಡದಲ್ಲಿರುವುದು ವಿಶೇಷ.

ಕುಂದಾಪುರ, ಮೈಸೂರು, ಬೆಂಗಳೂರು ಕಡೆಗಳಲ್ಲಿ ಮಾತಿನ ಭಾಗದ ಚಿತ್ರೀಕರಣ, ಹಾಡುಗಳಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಚಿತ್ರತಂಡಕ್ಕಿದೆ. ಎಮಿನೆಂಟ್ ಮೂವೀ ಮೇಕರ್ಸ್ ಸಂಸ್ಥೆ ಮೂಲಕ ಮೊದಲಬಾರಿ ನಿರ್ಮಾಣ ಮಾಡುತ್ತಿರುವುದು ಸತೀಶ್ ರೆಡ್ಡಿ, ಇವರೊಂದಿಗೆ ರಮೇಶ್ ಶಿವ, ಸತ್ಯನ್.ಎಸ್.ಪಿ ಕೈ ಜೋಡಿಸಿದ್ದಾರೆ.
ಇದೀಗ ಉತ್ಸಾಹದಿಂದ ಮೊದಲ ಹಂತದ ಚಿತ್ರೀಕರಣ ಆರಂಭಿಸುವ ಈ ಚಿತ್ರಕ್ಕೆ ಶಿವ ಅವರ ಛಾಯಾಗ್ರಹಣವಿದೆ. ಯುವನ್ ಶೇಖರ್ ರಾಜಾ ಸಂಗೀತ, ಹರ್ಷ ಸಂಕಲನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೌಡ್ರು ಹೋಟೆಲ್ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.