Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ನಾಳೆಯಿಂದ ಬಿಡುಗಡೆ
Posted date: 09 Thu, May 2019 12:04:51 PM

ಇದೊಂದು ಸಾಮಾಜಿಕ ಕಳಕಳಿ ಇರುವ ಚಿತ್ರ. ವಿಶೇಷ ಚೇತನರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಎಚ್ ಸೋಮಶೇಖರ್ ಅವರ ಹೆತ್ತವರು ಅಂಗವೈಕಲ್ಯ ಹೊಂದಿದವರು. ನಿರ್ದೇಶಕ ರಾಜ ರವಿ ವರ್ಮಾ ಸಹಾ ವಿಕಲಚೇತನರಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಲ್ಲಿ ಭೋಗಪುರದ ಅಂಧ ಬಾಲಕ ಮಾಸ್ಟರ್ ಮಹೇಶ್ ಶುಕ್ಲಾಚಾರಿ ಪಾತ್ರಧಾರಿಯಾಗಿದ್ದಾನೆ. ಜಕಣಾಚಾರಿ ಪಾತ್ರಧಾರಿಯಾಗಿರುವ ಲಿಂಗರಜಪುರದ ಹುಡುಗ ಮಾಸ್ಟರ್ ಜಯ್ಯದ್ ಕೂಡಾ ವಿಶೇಷಚೇತನರಾಗಿದ್ದಾರೆ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ರಾಜ ರವಿ ವರ್ಮ ಈ ಚಿತ್ರಕ್ಕೆ ‘ಎಂಡೋಸಲ್ಫಾನ್’ ವಿಷ ರಾಸಾಯನಿಕದಿಂದ ಅಂಗ ವೈಕಲ್ಯಕ್ಕೆ ತುತ್ತಾಗಿರುವವರ ಗಂಭೀರ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಕಥೆ, ಚಿತ್ರಕಥೆ ರಚಿಸಿದ್ದಾರೆ.

ಮಾಸ್ಟರ್ ವಿನಯ್ ಸೂರ್ಯ, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಗಿರೀಶ್ ಶೆಟ್ಟಿ, ಶಿವು, ಮೀನ, ಪಂಕಜ ರವಿಶಂಕರ್, ಮಂಜು ಸೂರ್ಯ ಹಾಗೂ ಇತರರು ತಾರಗಣದಲ್ಲಿದ್ದಾರೆ.

ರಾಜ್ ಪ್ರಿಯ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎ ರಾಮು. ಸಾಮ್ರಾಟ್ ಎಸ್ ಛಾಯಾಗ್ರಹಣ, ಸಿ ಜೆ ಅನಿಲ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಮತ್ತು ರಾಜ ರವಿ ವರ್ಮ ಗೀತ ಸಾಹಿತ್ಯ ಒದಗಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.