ಮಯೂರ ಪ್ರೊಡಕ್ಷನ್ ನಿರ್ಮಿಸಿರುವ ‘ಜರ್ಕ್’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಂಪಲಿ ಚಾರಿ ಹಾಗೂ ರವಿ ಕುಮಾರ್ ಈ ಚಿತ್ರದ ನಿರ್ಮಾಪಕರುಗಳು.
ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ‘ಜರ್ಕ್’ ಇದ್ದೇ ಇರುತ್ತದೆ. ಅದು ಹೇಗೆ, ಯಾಕೆ, ಏನು ಎಂದು ನೀವು ಅರಿಯಬೇಕಾದರೆ ‘ಜರ್ಕ್’ ಸಿನಿಮಾಕ್ಕೆ ಹಾಜರಿ ಹಾಕಬೇಕು.
ಬೆಂಗಳೂರು ಮೆಟ್ರೊ ಸಂಚಾರ ವ್ಯವಸ್ಥೆಯ ಉದ್ಯೋಗಿ ಮಹಂತೇಶ್ ಮದಕರಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ‘ತಿಥಿ’ ಖ್ಯಾತಿಯ ನಟ ಗಡ್ಡಪ್ಪ ಇಲ್ಲಿ ಎರಡು ಶೇಡ್‌ನಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ರಾಜ್ ಚಿತ್ರದ ಕಥಾ ನಾಯಕ. ನಿತ್ಯ ರಾಜ್ ಹಾಗೂ ಆಶಾ ಭಂಡಾರಿ ಕಥಾ ನಾಯಕಿಯರು. ಸಚಿನ್, ಬುಲೆಟ್ ಪ್ರಕಾಶ್, ಪವನ್, ಬಿರಾದರ್, ಎಂ.ಎಸ್ ಉಮೇಶ್, ಕುರಿ ರಂಗ, ಅರಸು, ಮನು ಪಾಂಡು ಪೋಷಕ ಪಾತ್ರಗಳಲ್ಲಿದ್ದಾರೆ.
ಎಡ್ವರ್ಡ್ ಷಾ ಸಂಗೀತ ನೀಡಿದ್ದಾರೆ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ, ಮಂಜುನಾಥ್ ಕಾಲಮನೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ಈ ಚಿತ್ರಕ್ಕಿದೆ.