Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರೀತಿ ಪ್ರಾಪ್ತಿರಸ್ತು ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 13 Thu, Apr 2017 08:49:58 AM

ಹರ್ಷ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ಸಂಜಿವ್ ಎಸ್ ಖಸನೀಸ ನಿರ್ಮಿಸುತ್ತಿರುವ ಹಾಗೂ ಶ್ರೀಕಾಂತ್ ಎಸ್ ಖಾಸನೀಸ ಅವರ ಸಹ ನಿರ್ಮಾಣವಿರುವ ‘ಪ್ರೀತಿ ಪ್ರಾಪ್ತಿರಸ್ತು ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಚಿತ್ರಕ್ಕೆ ಈವರೆಗೂ ಬೆಂಗಳೂರು, ಸಂಡೂರು, ಹುಬ್ಬಳ್ಳಿ, ಸವದತ್ತಿ ಮುಂತಾದ ಕಡೆ ಇಪ್ಪತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಎರಡು ಸಾಹಸ ಸನ್ನಿವೇಶಗಳ ಹಾಗೂ ಮಾತಿನ ಭಾಗದ ಸನ್ನಿವೇಶಗಳು ಈ ಹಂತದಲ್ಲಿ ಚಿತ್ರೀಕರಣಗೊಂಡಿದೆ. ಪ್ರಮೋದ್ ಪಂಜು, ಅದಿತಿ ಪ್ರಭುದೇವ, ಭಜರಂಗಿ ಲೋಕಿ, ವಿಶ್ವ, ಅಚ್ಯುತಕುಮಾರ್ ಮುಂತದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ವೀರೇಶ್ ಪಿ.ಎಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ರಾಜೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಿಫ಼ರೆಂಟ್ ಡ್ಯಾನಿ, ವಿನೋದ್ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಬರೆದಿದ್ದಾರೆ. ಪ್ರಮೋದ್ ಪಂಜು, ಅದಿತಿ ಪ್ರಭುದೇವ, ಅಚ್ಯುತಕುಮಾರ್, ಭಜರಂಗಿ ಲೋಕಿ, ತರಂಗ ವಿಶ್ವ, ಎಂ.ಎಸ್.ಉಮೇಶ್, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೀತಿ ಪ್ರಾಪ್ತಿರಸ್ತು ಚಿತ್ರಕ್ಕೆ ಬಿರುಸಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.