Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಂಗಾರ s/o ಬಂಗಾರದ ಮನುಷ್ಯ ನಾಳೆಯಿಂದ ತೆರೆಗೆ
Posted date: 18 Thu, May 2017 09:32:41 AM

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಹಾಗೂ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ‘ಬಂಗಾರ s/o ಬಂಗಾರದ ಮನುಷ್ಯ ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  

ಯೋಗಿ.ಜಿ.ರಾಜ್ ನಿರ್ದೇಶನದ ಈ ಚಿತ್ರಕ್ಕೆ ಇಟಲಿ, ಸ್ವಿಜರ್ ಲ್ಯಾಂಡ್, ಬೆಂಗಳೂರು, ಕನಕಪುರ, ಮೈಸೂರು ಹಾಗೂ ಕರ್ನಾಟಕದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ.
ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಜೈ ಆನಂದ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ಹರ್ಷ, ಕಲೈ ಅವರ ನೃತ್ಯ ನಿರ್ದೇಶನವಿರುವ  ಈ ಚಿತ್ರದ ತಾರಾಬಳಗದಲ್ಲಿ ಶಿವರಾಜ್ ಕುಮಾರ್, ವಿದ್ಯಾ ಪ್ರದೀಪ್ ವಿಶಾಲ್ ಹೆಗ್ಡೆ, ಚಿಕ್ಕಣ್ಣ, ಸಾಧು ಕೋಕಿಲಾ, ಶ್ರೀನಿವಾಸ ಮೂರ್ತಿ, ಶಿವರಾಮಣ್ಣ, ಹೊನ್ನವಳ್ಳಿ ಕೃಷ್ಣ, ಶ್ರೀನಾಥ್, ಬ್ರಹ್ಮಾವರ್ ಮುಂತಾದವರಿದ್ದಾರೆ

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಂಗಾರ s/o ಬಂಗಾರದ ಮನುಷ್ಯ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.