Chief Editor
Manohar. R (Manu)
Photo Journalist
chitrataramanu@gmail.com
+91 9845549026
ಲಕ್ಷ್ಯ ಚಿತ್ರದ ಚಿತ್ರೀಕರಣ ಪೂರ್ಣ
Posted date: 26 Thu, Sep 2019 10:47:26 AM

ಮೇಘ ಕಂಬೈನ್ಸ್ ಲಾಂಛನದಲ್ಲಿ ಮಹಾಂತೇಶ್ ತಾಂವಶಿ ಅವರು ನಿರ್ಮಿಸುತ್ತಿರುವ ‘ಲಕ್ಷ್ಯ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪ್ರೇಮ ಹಾಗೂ ಕೌಟುಂಬಿಕ ಕಥಾ ಹಂದರವುಳ್ಳ ಈ ಚಿತ್ರಕ್ಕೆ ಬೆಳಗಾವಿ, ಗೋಕಾಕ್, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಪ್ರಕಾಶ್ ಕೋಲಾರ ಈ ಚಿತ್ರದ ಸಹ ನಿರ್ಮಾಪಕರು.

`ಫಲಿತಾಂಶ` ಕಿರುಚಿತ್ರವನ್ನು ನಿರ್ದೇಶಿಸಿರುವ, ಕನ್ನಡ ಹಾಗೂ ತಮಿಳು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಹಾಗೂ ಎರಡು ಪುಸ್ತಕಗಳನ್ನು ಬರೆದಿರುವ ರವಿ ಸಾಸನೂರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  

5ಹಾಡುಗಳಿರುವ ಈ ಚಿತ್ರಕ್ಕೆ ಜುವಿನ ಸಿಂಗ್ ಸಂಗೀತ ನೀಡಿದ್ದಾರೆ. ಆನಂದು ಚಂದ್ರಸಬು ಛಾಯಾಗ್ರಹಣ ಹಾಗೂ ಶಿವ ಸರ್ವಂ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಭವ್ಯ ಪ್ರದೀಪ್ ಹಾಗೂ ಸತ್ಯನಾಥ್ ಅವರು ಬರೆದಿದ್ದಾರೆ.

ರಾಮಕೃಷ್ಣ, ಸಂತೋಷ್‌ರಾಜ್ ಝನಾರೆ, ಶರ್ಮಿಳಾ, ಸತ್ಯನಾಥ್, ನೀತಿನದ್ವಿ, ಮಾಲತಿಶ್ರೀ, ಶಿವಕುಮಾರ್ ಆರಾಧ್ಯ, ಬೇಬಿ ಗಮನ, ಬೇಬಿ ದಿವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲಕ್ಷ್ಯ ಚಿತ್ರದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.