Chief Editor
Manohar. R (Manu)
Photo Journalist
chitrataramanu@gmail.com
+91 9845549026
18 ರಿಂದ 25 ಚಿತ್ರೀಕರಣ ಮುಕ್ತಾಯ
Posted date: 09 Sat, Dec 2017 11:15:43 AM
ಈ ಹಿಂದೆ ತುಫಾನ್ ಹಾಗೂ ಬಳ್ಳಾರಿ ದರ್ಬಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಈ ಬಾರಿ ವಿಶೇಷ ಕಥಾನಕವನ್ನು ತೆಗೆದುಕೊಂಡು 18 ರಿಂದ 25  ಎಂಬ ಚಲನಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ೧೮ ರಿಂದ ೨೫ರ ಹರೆಯದ ಹೃದಯಗಳ ಮಿಡಿತವನ್ನು ಈ ಚಿತ್ರದಲ್ಲಿ ನಿರೂಪಿಸುವ ಪ್ರಯತ್ನವನ್ನು ಸ್ಮೈಲ್ ಶ್ರೀನು ಮಾಡಿದ್ದಾರೆ. ಈಗಾಗಲೇ ಬಳ್ಳಾರಿ, ಸಂಡೂರು, ಜಿಂದಾಲ್ ಹಾಗೂ ಚಿತ್ರದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದುರ್ಗದ ಗಾಯಿತ್ರಿ ಶಾರದ ದೇವಸ್ಥಾನದಲ್ಲಿ ನಾಯಕ ಅಭಿರಾಮ್, ಅಖಿಲ, ಋಷಿತೇಜ, ವಿದ್ಯಾ ಅಭಿನಯದ ರಂಗು  ಚೆಲ್ಲಿ ರಂಗು ಚೆಲ್ಲಿ ಬರೆದಂತೆ ರಂಗವಲ್ಲಿ  ಎಂಬ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿತು. 
ಲಕ್ಷ್ಮಿಪ್ರಿಯ ಪ್ರೊಡಕ್ಷನ್ ಲಾಂಛನದಲ್ಲಿ ತಮ್ಮಲಪಲ್ಲಿ ರಾಮ ಸತ್ಯನಾರಾಯಣ ನಿರ್ಮಿಸುತ್ತಿರುವ  ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ಕೆ. ನಾಯ್ಡು ಛಾಯಾಗ್ರಹಣ,ಬಿ ಮಲ್ಲಿ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವೈಯಲೆನ್ಸ್  ವೇಲು, ಸಾಹಸ ಚಿರಂಜೀವಿ ನೃತ್ಯ ನಿರ್ದೇಶನವಿದೆ. ಅಭಿರಾಮ್, ಋಷಿತೇಜ, ಅಖಿಲಾ, ವಿದ್ಯಾಶ್ರೀ, ಫಾರೂಕ್ ಖಾನ್, ನಾಗ ಶೇಖರ್, ಉದಯ ಭಾಸ್ಕರ್, ರವಿರಾಮ್, ಪೋಲಾ ಶ್ರೀನಿವಾಸ ಬಾಬು, ರಾಕ್ ಲೈನ್ ಸುಧಾಕರ್,  ಮಿಮಿಕ್ರಿ ಗೋಪಿ, ಸೌಮ್ಯ, ಕುಮಾರ್, ಮುಂತಾದವರ ತಾರಾ ಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 18 ರಿಂದ 25 ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.