ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ 19 Age is ನಾನ್‌ಸೆನ್ಸ್?. ಚಿತ್ರಕ್ಕೆ ಪುಟ್ಟಣ್ಣ ಸ್ಟುಡಿಯೋ, ಮಂಚಿನಬೆಲೆ ಡ್ಯಾಂ, ಹಾಗೂ ನಗರದ ಸುತ್ತಮುತ್ತ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳೊಂದಿಗೆ ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ. ಎರಡು ಹಾಡು ಮೂರು ಫೈಟ್ ಬಾಕಿ ಇದೆ. ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ, ಛಾಯಾಗ್ರಹಣ - ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ - ಮನುಷ್, ಮಧುಮಿತ, ಮೇಸ್ತ್ರಿ ಬಾಲು, ಸೌಭಾಗ, ಶ್ರೀಲಕ್ಷ್ಮಿ, ಕಾವ್ಯಪ್ರಕಾಶ್, ರಂಗಸ್ವಾಮಿ ಮುಂತಾದವರಿದ್ದಾರೆ. ಲವ್-ಆಕ್ಷನ್ ಜೊತೆಗೆ 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತುವಿದು.