Chief Editor
Manohar. R (Manu)
Photo Journalist
chitrataramanu@gmail.com
+91 9845549026
25 ವರ್ಷಗಳ ನಂತರ ಮರು ಬಿಡುಗಡೆ `ನಿಶ್ಕರ್ಷ`
Posted date: 17 Tue, Sep 2019 – 09:07:49 PM

ನಿಶ್ಕರ್ಷ ಸುನೀಲ್‌ಕುಮಾರ್ ದೇಸಾಯಿ ಅವರ ಸೂಪರ್ ಹಿಟ್ ಚಿತ್ರಗಳಲ್ಲೊಂದು. ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್‌ಭಟ್ ಅಭಿನಯಿಸಿದ್ದ ಈ ಚಿತ್ರವನ್ನು ಬಿ.ಸಿ.ಪಾಟೀಲ್ ಅವರೆ ಸೃಷ್ಠಿ ಫ಼ಿಲಂಸ್ ಮೂಲಕ ನಿರ್ಮಾಣ ಮಾಡಿದ್ದರು. ೧೯೯೩ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಸಿತ್ತು. ‘ನಿಷ್ಕರ್ಷ‘ ಈ ವಾರ ಅಂದರೆ ಸೆಪ್ಟೆಂಬರ್ 20 ರಂದು ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 18 ಡಾ||ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅದೇ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ.  

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು. 93 ರಲ್ಲೇ ಅಂಥಾದ್ದೊಂದು ಅದ್ಭುತ ಥ್ರಿಲ್ಲರ್ ಸಿನಿಮಾ ಕೊಟ್ಟಿದ್ದರು ಸುನೀಲ್ ಕುಮಾರ್ ದೇಸಾಯಿ. ಈ ಚಿತ್ರ ಹಲವು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, ಸಿನಿಮಾ ಭರ್ಜರಿಯಾಗಿಯೇ ರೀರಿಲೀಸ್ ಆಗುತ್ತಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - 25 ವರ್ಷಗಳ ನಂತರ ಮರು ಬಿಡುಗಡೆ `ನಿಶ್ಕರ್ಷ` - Chitratara.com
Copyright 2009 chitratara.com Reproduction is forbidden unless authorized. All rights reserved.