Chief Editor
Manohar. R (Manu)
Photo Journalist
chitrataramanu@gmail.com
+91 9845549026
25 ವರ್ಷದ ನಂತರ ಕ್ರೇಜಿ ಸ್ಟಾರ್ ಮತ್ತು ಕನಸಿನ ರಾಣಿ ಡ್ಯಾನ್ಸ್
Posted date: 30 Thu, Nov 2017 09:49:50 AM
ಈ ವಾರದ ಉದಯ ಸಿಂಗರ್ ಜೂನೀಯರ‍್ಸ್ ನಲ್ಲಿ ಯಾರಿವಳು ಯಾರಿವಳು ಹಾಡು ಮತ್ತೆ ಎಲ್ಲ್ಲರನ್ನು  ರಾಮಾಚಾರಿ ಚಿತ್ರವನ್ನು ನೆನಪಿಸಿಕೊಡುತ್ತದೆ. ರಾಮಾಚಾರಿ ಚಿತ್ರದ ರವಿಚಂದ್ರನ್ ಮತ್ತು ಮಾಲಾಶ್ರೀ ಅದೇ ಹಾಡಿಗೆಸ್ಟೆಪ್ ಹಾಕಿ ವೀಕ್ಷಕರನ್ನು ರಂಜಿಸಿದ್ದಾರೆ.

ಶೂಟಿಂಗ್ ನಡೆಯುತ್ತಿದ್ದಾಗ ಏನ್‌ ಆಗ್ತಿದೆ..ಯಾಕ್‌ ಇಷ್ಟೆಲ್ಲಾ ಶಾಟ್ ತಗೊಳ್ತಾ ಇದ್ದಾರೆ ಅಂತ ಒಂದೂ ಗೊತ್ತಾಗ್ತಾ ಇರಲಿಲ್ಲ. ಯಾವತ್ತು ಹಾಡು ಪೂರ್ತಿಯಾಗಿ ತೆರೆಯ ಮೇಲೆ ಬಂತೋ, ರವಿಚಂದ್ರನ್‌ ಅನ್ನೋಅಗಾಧ ಶಕ್ತಿಯ ಅರಿವು ನನಗಾಯ್ತು ಹೀಗೆಂದವರು ಕನ್ನಡದ ಖ್ಯಾತ ನಟಿ, ಕನಸಿನ ರಾಣಿ ಮಾಲಾಶ್ರೀ. ಇಪ್ಪತ್ತೈದು ವರ್ಷಗಳ ಹಿಂದಿನ ರಾಮಾಚಾರಿ ಚಿತ್ರದಚಿತ್ರೀಕರಣ ಸಂದರ್ಭವನ್ನು ಮತ್ತೆ ನೆನೆಪಿಸಿಕೊಳ್ಳಲು ಕಾರಣವಾಗಿದ್ದು ಉದಯ ಟಿವಿ ಯ ಉದಯ ಸಿಂಗರ್ ಜ್ಯೂನಿಯರ‍್ಸ್ ವೇದಿಕೆ. 
ಕಾರ್ಯಕ್ರಮಕ್ಕೆ ಮುಖ್ಯಅಥಿತಿಯಾಗಿ ಆಗಮಿಸಿದ ಮಾಲಾಶ್ರೀ ರವಿಚಂದ್ರನ್‌ ಜತೆಗಿನ ಆವತ್ತಿನ ದಿನಗಳನ್ನು ನೆನಪಿಸಿಕೊಂಡದ್ದಷ್ಟೇ ಅಲ್ಲ, ಒಂದು ಹಾಡಿಗಾಗಿ ರವಿಚಂದ್ರನ್‌ ಅವರು ಇಷ್ಟು ಶ್ರಮ ಹಾಕುತ್ತಾರೆ. ಅವರ ಯಶಸ್ಸಿನ ಗುಟ್ಟು ಇದೇ ಆಗಿದೆ. ಅವರಿಂದ ನಾನು ಕಲಿತದ್ದು ತುಂಬಾ ಇದೆ ಎಂದು ಮಾಲಾಶ್ರಿ ಹೇಳಿದರು. ರವಿಚಂದ್ರನ್‌ ಕೂಡಾ ಮಾಲಾಶ್ರಿಯವರ ಬಗ್ಗೆ ಮಾತನಾಡಿ ಕನ್ನಡ ಚಿತ್ರರಂಗಕ್ಕೆಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು. 
ಮಾಲಾಶ್ರೀ ಮತ್ತು ರವಿಚಂದ್ರನ್ ವಿಶೇಷ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯ."ಉದಯ ಸಿಂಗರ್ ಜೂನಿಯರ‍್ಸ್" ನಲ್ಲಿ ಪ್ರಸಾರವಾಗುತ್ತದೆ
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 25 ವರ್ಷದ ನಂತರ ಕ್ರೇಜಿ ಸ್ಟಾರ್ ಮತ್ತು ಕನಸಿನ ರಾಣಿ ಡ್ಯಾನ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.