Chief Editor
Manohar. R (Manu)
Photo Journalist
chitrataramanu@gmail.com
+91 9845549026
3 ಘಂಟೆ 30 ದಿನ 30 ಸೆಕೆಂಡ್ : ಚಂದನ್ ಶೆಟ್ಟಿ ಹಾಡು ಜನಪ್ರಿಯ
Posted date: 11 Sat, Nov 2017 10:34:54 AM
ಶೀರ್ಷಿಕೆಯಲ್ಲಿಯೇ ಕೌತುಕ ಬಚ್ಚಿಟ್ಟುಕೊಂಡಿರೋ ಚಿತ್ರ ‘3 ಘಂಟೆ 30 ದಿನ 30 ಸೆಕೆಂಡ್. ಚಂದ್ರಶೇಖರ್ ಆರ್ ಪದ್ಮಶಾಲಿ ನಿರ್ಮಾಣದ ಮತ್ತು ಮಧುಸೂಧನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಇತ್ತೀಚೆಗೆ ತಾನೆ ಈ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿದ್ದವು. ಕಲಾಪ್ರಪಂಚದ ಯುವ ತಾರೆ, ರಾಕ್ ಹಾಡುಗಳಿಂದ ಪ್ರಸಿದ್ದರಾಗಿರುವ ಚಂದನ್ ಶೆಟ್ಟಿ ಹಾಡಿರುವ ಇದೇ ಚಿತ್ರದ ಹಾಡೊಂದು ವೈರಲ್ ಆಗುತ್ತಿದೆ.  
ಈಗಾಗಲೇ ಸಾಮಾಜಿಕ ಜಲತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಈ ಚಿತ್ರಕ್ಕೆ ಇತ್ತೀಚಿಗೆ ಚಂದನ್ ಶೆಟ್ಟಿ ಹಾಡಿರುವ ಶೀರ್ಷಿಕೆ ಗೀತೆ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ನೋಡುಗರನ್ನು ಸಂಪಾದಿಸಿಕೊಂಡಿದೆ.
ಒಂದು ಕುತೂಹಲಕಾರಿ ಕನ್ನಡ ಸಿನೆಮಾ ಬಹಳ ಅಚ್ಚುಕಟ್ಟಾಗಿ, ಶಿಸ್ತಿನಿಂದ ತಯಾರಾಗಿರುವ ಬ್ರೈನ್ ಶೇರ್ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ‘೩ಘಂಟೆ ೩೦ ದಿನ ೩೦ ಸೆಕೆಂಡ್ಸ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮುಕ್ತವಾಗಿ ಪ್ರಶಂಸೆ ಮಾಡಿ ಯಾವುದೇ ಕತ್ತರಿ ಪ್ರಯೋಗ ಇಲ್ಲದೆ ಯು/ಎ ಅರ್ಹತಾ ಪತ್ರವನ್ನು ದಯಪಾಲಿಸಿದೆ.
ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್ ಮಾಸ್ ಅಂಶಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಕುತೂಹಲ, ಹೃದಯ ಕಲಕುವ ಭಾವನಾತ್ಮಕ ಅಂಶಗಳು, ಪ್ರೇಕ್ಷಕ ಕುರ್ಚಿಯ ತುದಿಯಲ್ಲೇ ಕುಳಿತು ನೋಡುವ ಹಾಗೆ ಮಾಡುವ ಅಂಶಗಳೊಂದಿಗೆ ಒಂದು ಪ್ರೇಮಕಥೆಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ

ಅರು ಗೌಡ, ಕಾವ್ಯ ಶೆಟ್ಟಿ, ದೇವರಾಜ್, ಸುಧಾರಾಣಿ ತಾರಾಬಳಗದ ಈ ಚಿತ್ರಕ್ಕೆ ಮಧುಸೂಧನ್ ಹಾಗೂ ಜಯಂತ್ ಕಾಯ್ಕಿಣಿ ಗೀತ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ಸಂಭ್ರಮ್ ಈ ಚಿತ್ರದ ಸಂಗೀತ ನಿರ್ದೇಶಕರು.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 3 ಘಂಟೆ 30 ದಿನ 30 ಸೆಕೆಂಡ್ : ಚಂದನ್ ಶೆಟ್ಟಿ ಹಾಡು ಜನಪ್ರಿಯ - Chitratara.com
Copyright 2009 chitratara.com Reproduction is forbidden unless authorized. All rights reserved.