ಇದು ಅಸಲಿ ಬದುಕಿನ ಆಟ. ಕುತೂಹಲದ ಜೊತೆಗೆ ಅಚ್ಚುಕಟ್ಟಾದ ನಿರೂಪಣೆ, ತಾರಾಗಣ,
ಅತ್ಯುತ್ತಮ ತಂತ್ರಜ್ಞರು ಸೇರಿಕೊಂಡು ಮಾಡಿರುವ ಹೊಸ ಬಗೆಯ ಚಿತ್ರ? ೩ ಘಂಟೆ ೩೦ ದಿನ ೩೦ ಸೆಕೆಂಡ್? ಸಿನಿಮಾ ಇಂದ ನೀಡುತ್ತಿದ್ದಾರೆ. ಇದೆ ಶುಕ್ರವಾರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬ್ರೈನ್ ಶೇರ್ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಚಂದ್ರಶೇಖರ ಪದ್ಮಶಾಲಿ ಆರ್ ನಿರ್ಮಾಪಕರಾಗಿದ್ದಾರೆ. ಇವರ ಜೊತೆ ೧೦ ಸ್ನೇಹಿತರು ಸಹ ಸೇರಿಕೊಂಡಿದ್ದಾರೆ.
‘೩ ಘಂಟೆ ೩೦ ದಿನ ೩೦ ಸೆಕೆಂಡ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮುಕ್ತವಾಗಿ ಪ್ರಶಂಸೆ ಮಾಡಿ ಯಾವುದೇ ಕತ್ತರಿ ಪ್ರಯೋಗ ಇಲ್ಲದೆ ಯು/ಎ ಅರ್ಹತಾ ಪತ್ರವನ್ನು ದಯಪಾಲಿಸಿದೆ. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್ ಮಾಸ್ ಅಂಶಗಳನ್ನು ಈ ಚಿತ್ರದಲ್ಲಿ ಸೇರಿಸಿದ್ದಾರೆ. ಇವರದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ. ಹೆಜ್ಜೆ ಹೆಜ್ಜೆಗೂ ಕುತೂಹಲ, ಹೃದಯ ಕಲಕುವ ಭಾವನಾತ್ಮಕ ಅಂಶಗಳು, ಪ್ರೇಕ್ಷಕ ಕುರ್ಚಿಯ ತುದಿಯಲ್ಲೇ ಕುಳಿತು ನೋಡುವ ಹಾಗೆ ಮಾಡುತ್ತಲೆ ಒಂದು ಪ್ರೇಮಕಥೆಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.
ಅರು ಗೌಡ, ಕಾವ್ಯ ಶೆಟ್ಟಿ, ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್, ಜಯಲಕ್ಷ್ಮಿ ಪಾಟಿಲ್, ಯಮುನ, ಮೇಘನ, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಅನಂತ ವೇಲು, ವಿಶ್ವ, ಹನುಮಂತೆ ಗೌಡ, ಯತಿರಾಜ್, ಟಿ ಎಸ್ ನಾಗಾಭರಣ, ಅಂಜಿನಪ್ಪ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಮಧುಸೂಧನ್ ಹಾಗೂ ಜಯಂತ್ ಕಾಯ್ಕಿಣಿ ಗೀತ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ಸಂಭ್ರಮ್ ಈ ಚಿತ್ರದ ಸಂಗೀತ ನಿರ್ದೇಶಕರು. ಶ್ರೀನಿವಾಸ ರಾಮಯ್ಯಾ ಛಾಯಾಗ್ರಾಹಕರು, ಕ್ರೇಜಿ ಮೈಂಡ್ಸ್ ಶ್ರೀ ಸಂಕಲನ, ತ್ರಿಭುವನ್ ನೃತ್ಯ, ಮಾಸ್ ಮಾದ ಸಾಹಸ, ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಅವರು ಒಂದು ಹಾಡಿನಲ್ಲಿ ಮಿಂಚಿದ್ದಾರೆ.