Chief Editor
Manohar. R (Manu)
Photo Journalist
chitrataramanu@gmail.com
+91 9845549026
50ರ ಸಂಚಿಕೆಯಲ್ಲಿ ಜೀವನದಿ
Posted date: 13 Thu, Jul 2017 10:32:15 AM
ಉದಯ ಟಿವಿ ಎಂದರೆಎಂತವರಿಗೂಒಂದು ಬಾಂಧವ್ಯ ನೆನಪಾಗುವುದು ಸಹಜ. ಏಕೆಂದರೆ ೨ ದಶಕಗಳಿಂದ ಕನ್ನಡಿಗರ ಸಾಂಸ್ಕೃತಿಕರಾಯಭಾರಿಯಾಗಿರುವ ವಾಹಿನಿ ಉದಯ ವಾಹಿನಿ. ಈಗ ಇದೇಉದಯ ವಾಹಿನಿ ಮತ್ತೊಂದು ಸಡಗರದಲ್ಲಿದೆ. 
ಮೇ ೮ ರಂದುಪ್ರಾರಂಭವಾದ ಜೀವನದಿ ಎಂಬ ಧಾರಾವಾಹಿ ಈಗ ೫೦ ಸಂಚಿಕೆಗಳನ್ನು ಪೂರೈಸುತ್ತಿರುವುದಲ್ಲದೇಕನ್ನಡಿಗರ ಹೃದಯಕ್ಕೂ ಲಗ್ಗೆ ಹಾಕಿದೆಎಂದರೆಅತಿಶಯೋಕ್ತಿಯಲ್ಲ. ಮೀಡಿಯಾ ಹೌಸ್ ಮತ್ತು ಸಂಗಮ ಫಿಲ್ಮ್ ನೆಟ್ವರ್ಕ್ ಲಾಂಛನದಅಡಿಯಲ್ಲಿ ನಿರ್ಮಾಣಗೊಂಡಿರುವಜೀವನದಿಕಾದಂಬರಿಯಾಧರಿತಕಥೆಯಾಗಿದೆ. 
ಒಂದು ಹೆಣ್ಣು ಹೇಗೆ ತನ್ನ ಸಹನೆಯನ್ನೆ ಅಸ್ತ್ರವಾಗಿಸಿಕೊಂಡು ತನ್ನೆಲ್ಲ ಕಷ್ಟಗಳನ್ನು ಮೆಟ್ಟಿಜೀವನದಲ್ಲಿಗುರಿ ಮುಟ್ಟುತ್ತಾಳೆ ಎನ್ನುವಕಥಾಹಂದರ ಹೊಂದಿರುವಜೀವನದಿ ಈಗಿನ ಕಾಲಕ್ಕೆ ಧಾರಾವಾಹಿಯಾಗಿರೂಪು ಪಡೆದಿರುವುದು ಸವಾಲೇ ಸರಿ. ಏಕೆಂದರೆಎಲ್ಲೆಲ್ಲೂಅತ್ತೆ ಸೊಸೆ ಬಡಿದಾಟ ಮೊದಲಾದ ಕಥೆಗಳನ್ನು ಮಾಡುವ ಈ ಕಾಲದಲ್ಲಿಇದುಒಂದು ವಿಭಿನ್ನಕಥೆಯಾಗಿ ನಿಂತಿರುವುದರಲ್ಲಿಯಾವ ಸಂದೇಹವೂಇಲ್ಲ. 
ಜೀವನದಿ ಸರಸ್ವತಿ ನಟರಾಜನ್‌ರವರಜ್ಯೋತಿಕಾದಂಬರಿಯಿಂದ ಸ್ಪೂರ್ತಿಗೊಂಡಕಥೆಯಗಿದೆ. ಜ್ಯೋತಿ ಸಾಮಾನ್ಯ ಮನೆತನದ ಹೆಣ್ಣುಮಗಳು. ಓದಿ ಸಮಾಜದಲ್ಲಿಏನಾದರೂ ಸಾಧಿಸಬೇಕು ಎಂಬ ಆಶಾವಾದವುಳ್ಳವಳು. ಆದರೆ ಅವಳ ಆಶೋತ್ತರಗಳಿಗೆ ನೀರೆರೆಯುವವರುಯಾರೂಇರುವುದಿಲ್ಲ. ಸ್ಫೂರ್ತಿತುಂಬಬೇಕಾದಅಮ್ಮನೇಜ್ಯೋತಿಗೆಓದು ಬಿಡಿಸಿ ಮದುವೆ ಮಾಡಲು ಉದ್ಯುಕ್ತಳಾಗುತ್ತಾಳೆ. ಜ್ಯೊತಿಯಸಹಾಯಕ್ಕೆ ನಿಲ್ಲುವತಂದೆರಘುರಾಮ ಮತ್ತು ಅವಳ ಸೋದರತ್ತೆರಮಾ.
ಸಮಾಜದಲ್ಲಿಸಾಮಾನ್ಯವಾಗಿಕಾಣಿಸುವ ಹಾಗೆ ಹಣವಂತರ, ರಾಜಕೀಯ ಪುಢಾರಿಗಳ ಸದ್ಧ್ದಡಗಿಸುವಧೈರ್ಯತೋರುವಜ್ಯೋತಿಗೆ ನಾನಾ ತರಹದ ತೊಂದರೆಗಳು ಬರತ್ತೆ. ಆದರೆಯಾವುದನ್ನು ಲೆಕ್ಕಿಸದಜ್ಯೋತಿ ಧಿಟ್ಟತನದಿಂದ ಮುನ್ನಡೆಯುವುದೇಕಥಾಹಂದರ. 
ಮುಖ್ಯ ಭೂಮಿಕೆಯಲ್ಲಿ ಹಿರಿಯಕಲಾವಿದರಾದ ನಾಗೇಂದ್ರ ಶಾ, ಸುನೇತ್ರಾ ಪಂಡಿತ್, ಪುಷ್ಪಾ ಅನಿಲ್ ಮೊದಲಾದವರದಂಡೇಇದೆ. ಇಂತಹ ಸಮಾಜದ ಸ್ವಾಸ್ಥ್ಯ ಸುಧಾರಿಸುವ ಒಳ್ಳೆಯ ಸಂದೇಶ ಸಾರುವಜೀವನದಿಯಂತಹಧಾರಾವಾಹಿಯಲ್ಲಿ ನಾನು ಅಭಿನಯಿಸುತ್ತಿರುವುದು ನನಗೆ ಹೆಮ್ಮೆಯ ವಿಷಯಎನ್ನುತ್ತಾರೆ ನಾಗೇಂದ್ರ ಶಾ. ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದರೂ ಜೀವನದಿ ಮನಸ್ಸಿಗೆ ಹತ್ತಿರವಾದ ಪ್ರಾಜೆಕ್ಟ್‌ಎನ್ನುತ್ತಾರೆ ಸುನೇತ್ರ ಪಂಡಿತ್. 
ಇನ್ನುಜೀವನದಿಯಲ್ಲಿಜ್ಯೋತಿಯ ಪಾತ್ರ ಮಾಡುತ್ತಿರುವ ದೀಪಿಕ ತಮ್ಮ ಮನದಾಳದ ಸಂತಸ ಪ್ರಕಟಪಡಿಸಿದ್ದಾರೆ. ಎಲ್ಲಿ ಹೋದರೂಜನ ನನ್ನನ್ನುಜ್ಯೋತಿಅಂತಲೇಕಂಡುಹಿಡಿಯುತ್ತಾರೆಎನ್ನುತ್ತಾರೆ. ಪ್ರತಿ ಹೆಣ್ಣು ಮಕ್ಕಳು ದಿಟ್ಟತನದಿಂದ ಹೋರಾಡಿದರೆಎಲ್ಲೂ ಹೆಣ್ಣಿಗೆ ಶೋಷಣೆ ನಡೆಯುವುದಿಲ್ಲ ಎನ್ನುತ್ತಾರೆ ದೀಪಿಕಾ. 
ಈ ಧಾರಾವಾಹಿಗೆಕನ್ನಡಕಿರುತೆರೆಯ ಹಿರಿಯ ಬರಹಗಾರ, ನಿರ್ದೇಶಕಬಿ.ಸುರೇಶ್ ಸಾರಥ್ಯವಿರುವುದುಇನ್ನೊಂದು ವಿಶೇಷ. 
50 ಸಂಚಿಕೆ ಪೂರ್ಣಗೊಂಡ ಜೀವನದಿ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 50ರ ಸಂಚಿಕೆಯಲ್ಲಿ ಜೀವನದಿ - Chitratara.com
Copyright 2009 chitratara.com Reproduction is forbidden unless authorized. All rights reserved.