Chief Editor
Manohar. R (Manu)
Photo Journalist
chitrataramanu@gmail.com
+91 9845549026
7 ಡೇಸ್ 6 ನೈಟ್ಸ್ ಮಲ್ಲಿಗೆ ನಗರದಲ್ಲಿ
Posted date: 09 Wed, Aug 2017 09:46:59 AM
ಬೆಳ್ಳಿ ಸಿನಿಮಾ ನಿರ್ಮಿಸಿದ ರಾಜೇಶ್ ಹೆಚ್.ಆರ್. ರವರು ಈಗ  ಯಶಸ್ವಿನಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ 7ಡೇಸ್ 6 ನೈಟ್ಸ್ ಚಿತ್ರವನ್ನು ಆರಂಭಿಸಿದ್ದಾರೆ.  ಈ ಚಿತ್ರವು ಕಳೆದ ವಾರ  ಮೈಸೂರಿನ ಅರಮನೆಯ  ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.  ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ರವರು ಕ್ಲಾಪ್ ಮಾಡಿದರು. ಈ ಚಿತ್ರವನ್ನು 40 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವುದಾಗಿ, ೫ ಹಾಡುಗಳು ಈ ಚಿತ್ರದಲ್ಲಿರುತ್ತೆ. ಹಾಡುಗಳಲ್ಲಿ ಪ್ರಮುಖ ಕಲಾವಿದರ ಪಾಲ್ಗೊಳ್ಳುತ್ತಾರೆ.  ಚಿತ್ರದ  ಚಿತ್ರೀಕರಣವನ್ನು ಮೈಸೂರು, ಕೆ.ಆರ್.ಪೇಟೆ, ಕುಶಾಲನಗರ, ಮಡಿಕೇರಿ, ವಯನಾಡ್ ಮತ್ತು ಕೇರಳದಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ.
 
ಹೊಸತನದ ಕಥಾವಸ್ತು ಇಷ್ಟವಾಗಿದ್ದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ -ಪರ್ಷಿ, ಛಾಯಾಗ್ರಹಣ - ಕೌಶಿಕ್, ಸಂಗೀತ್ - ಪ್ರಮೋದ್ ಸ್ಟೀಫನ್, ಕಲೆ-ಬಾಬು ಖಾನ್, ಸಂಕಲನ - ಶಿವು, ನೃತ್ಯ - ಜಗ್ಗು, ಸಾಹಸ - ಕೌರವ ವೆಂಕಟೇಶ್, ಕೋ-ಡೈರೆಕ್ಟರ್ - ರತೀಶ್ ಜಯಂತ್, ನಿರ್ವಹಣೆ - ನರಸಿಂಹ ಜಾಲಹಳ್ಳಿ, ತಾರಾಗಣದಲ್ಲಿ - ವಿಜಯ್ ಪ್ರೀತಮ್, ನಿಖಿಲ್ ಮಾಳಿಯಾಕಳ್,  ಧನಂಜಯ, ಸಂದೀಪ್ ಅಯ್ಯರ್, ಯಶಸ್,  ಮನೋಜ್ ಕುಮಾರ್, ನಿಶಾ, ಆಧ್ಯ, ಇಚ್ಛಾ ಜಯಶ್ರೀ, ಆಶಾ, ರಮ್ಯ, ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - 7 ಡೇಸ್ 6 ನೈಟ್ಸ್ ಮಲ್ಲಿಗೆ ನಗರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.