Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಮದುವೆಮನೆ`ಗೆ ಹಿನ್ನಲೆ ಸಂಗೀತ
Posted date: 24/July/2011

ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ‘ಮದುವೆಮನೆ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಚಿತ್ರ ಸೆಪ್ಟಂಬರ್‌ನಲ್ಲಿ ತೆರೆಗೆ ಬರಲಿದೆ.  
    ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಶ್ರದ್ಧಾಆರ್ಯ. ಅವಿನಾಶ್(ಜುಗಾರಿ), ತಬಲನಾಣಿ, ಶರಣ್, ಅರವಿಂದ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ:ನಾಗೇಶ್, ಜಾದವ್ ಮೈಸೂರು, ಚಿನ್ನ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.
    ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ಸುನೀಲ್‌ಕುಮಾರ್‌ಸಿಂಗ್ ಈ ಚಿತ್ರದ ನಿರ್ದೇಶಕರು.  ‘ಮದುವೆಮನೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ನಿರ್ದೇಶಕರಿಗೆ ಇದು ಚೊಚ್ಚಲ ಚಿತ್ರ.  ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ರವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ ಹಾಗೂ ಮೋಹನ್ ಬಿ ಕೆರೆ ಕಲಾನಿರ್ದೇಶನ ‘ಮದುವೆಮನೆ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಮದುವೆಮನೆ`ಗೆ ಹಿನ್ನಲೆ ಸಂಗೀತ - Chitratara.com
Copyright 2009 chitratara.com Reproduction is forbidden unless authorized. All rights reserved.