"ಅಸತೋಮ ಸದ್ಗಮಯ" ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಸಿಕ್ಕಿರುವ ರೆಸ್ಪಾನ್ಸ್ಗೆ ಚಿತ್ರತಂಡ ಈಗಗಾಗಲೆ ಫುಲ್ ಖುಷಿಯಾಗಿದೆ. ಟ್ರೇಲರ್ ನೋಡುವಾಗ ಇದೊಂದು ಎಜುಕೇಶನ್ ಸಿಸ್ಟಂ ಬಗ್ಗೆ ಮಾಡಿರುವಂತಹ ಸಿನೆಮಾ, ಹೆತ್ತವರು ಮತ್ತು ಮಕ್ಕಳ ಸಂಬಂದದ ಬಗ್ಗೆ, ಮುಚ್ಚುತ್ತಿರುವ ಸರಕಾರಿ ಶಾಲೆಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂಬುದು ತಿಳಿಯುತ್ತದೆ. ಜೊತೆಗೆ ಹಾರರ್, ಸಸ್ಪೆನ್ಸ್, ರೊಮ್ಯಾನ್ಸ್ ಕೂಡ ಇರುವುದರಿಂದ ಇದು ಬರೀ ಮೆಸೇಜ್ ಸಿನೆಮಾವಲ್ಲದೆ ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್ನಿಂದ ಕೂಡಿರುವಂತಹ ಸಿನೆಮಾ ಎಂಬುದು ತಿಳಿಯುತ್ತದೆ. ಟ್ರೇಲರ್ಗೆ ಕನ್ನಡ ಚಿತ್ರರಂಗದ ತಾರೆಯರಾದ, ಶರಣ್, ಚಂದನ್ ಶೆಟ್ಟಿ, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್, ಪ್ರಥಮ್ ಮುಂತಾದವರು ಉತ್ತಮ ಪ್ರತಿಕ್ರೀಯಯನ್ನ ನೀಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. "ಅಸತೋಮ ಸದ್ಗಮಯ" ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ನಿಧಾನವಾಗಿ ಕನ್ನಡ ಸಂಗೀತ ಪ್ರೇಮಿಗಳನ್ನ ಆಕರ್ಷಿಸುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಉತ್ತಮವಾಗಿದ್ದು, ವಿಜಯ್ ಪ್ರಕಾಶ್ ಹಾಡಿರುವಂತಹ ಸ್ಕ್ರಿಪ್ಟ್ ಬರೆದೋನು ಹಾಡು ಹಾಗೂ ಓ ಸಂಜೆ ಹಾಡಿನ ಬಗ್ಗೆ ಬಹಳಷ್ಟು ಮಂದಿ ಸ್ವತಹ ಫೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ರಾಧಿಕಾ ಚೇತನ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಐಕೇರ್ ಬ್ಯಾನರಿನಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದು, ರಾಜೇಶ್ ವೇಣೂರ್ ನಿರ್ದೇಶಿಸುತ್ತಿದ್ದಾರೆ.