ಸಾಯಿಪ್ರಕಾಶ್ ನಿರ್ಮಾಣ-ನಿರ್ದೇಶನದಲ್ಲಿ ಮೂಡಿಬರುತ್ತಿರುವ ದೇವರು ಕೊಟ್ಟ ತಂಗಿ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದು, ಹಾಡೊಂದರ ಶೂಟಿಂಗ್ ಮಾತ್ರ ಬಾಕಿ ಇದೆ. ನಾಯಕನಾಗಿ ಶಿವರಾಜ್ಕುಮಾರ್, ತಂಗಿಯಾಗಿ ಮಲಯಾಳಂ ನಟಿ ಮೀರಾ ಜಾಸ್ಮಿನ್ ಹಾಗೂ ನಾಯಕಿಯಾಗಿ ಚೆನ್ನೈ ಹುಡುಗಿ ಮೋನಿಕಾ ಅಭಿನಯಿಸುತ್ತಿದ್ದಾರೆ. ವಿಶೇಷ ಎಂದರೆ, ಈ ಇಬ್ಬರೂ ನಟಿಯರು ರಾಜ್ಯಪ್ರಶಸ್ತಿ ಪಡೆದವರು. ಇದು ಶಿವಣ್ಣ - ಸಾಯಿಪ್ರಕಾಶ್ ಜೋಡಿಯ ೯ನೇ ಚಿತ್ರ ಕೂಡ ಹೌದು. ತಾನು ಕೆಲಸ ಮಾಡುತ್ತಿರುವ ಮಾಲೀಕನ ಮನೆಗೆ ತಂಗಿ ಸೊಸೆಯಾಗಿ ಬಂದ ಮೇಲೆ ಅಲ್ಲಿ ನಡೆಯುವ ಘಟನಾವಳಿಗಳೇ ಚಿತ್ರದ ಹೈಲೈಟ್. ಈ ಅಣ್ಣ-ತಂಗಿ ಬಡವರಾದರೂ ಹೃದಯ ಶ್ರೀಮಂತಿಕೆ ಉಳ್ಳವರಾಗಿರುತ್ತಾರೆ. ಈಗಾಗಲೇ ಮೈಸೂರು ಸುತ್ತಮುತ್ತ ಘಾಟಿ ಸುಬ್ರಮಣ್ಯ, ಶಿಂಶಾ ಫಾಲ್ಸ್, ಚನ್ನಪಟ್ಟಣ, ಬಿಡದಿ, ಮುಂತಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ಕಳೆದ ೨೭ರಿಂದ ಪ್ರಸಾದ್ ಧ್ವನಿಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಕಾರ್ಯ ಕೂಡ ಪ್ರಾರಂಭವಾಗಿದ್ದು, ನವೆಂಬರ್ ಹೊತ್ತಿಗೆ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಸಾಯಿಪ್ರಕಾಶ್ರವರದ್ದು. ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರ ನಿರ್ಮಾಣದ ಈ ಚಿತ್ರಕ್ಕೆ ಬಿ.ಎ. ಮಧುರವರ ಸಂಭಾಷಣೆ, ಆರ್. ಗಿರಿ ಅವರ ಛಾಯಾಗ್ರಹಣ ಹಾಗೂ ಕೌರವ್ ವೆಂಕಟೇಶ್ರವರ ಸಾಹಸ ಸಂಯೋಜನೆ ಇದೆ. ಚಿತ್ರದ ಆರು ವಿಭಿನ್ನ ಹಾಡುಗಳಿಗೆ ಹಂಸಲೇಖರ ಸಾಹಿತ್ಯ-ಸಂಗೀತ ಇದೆ. ಶಿವಾನಿಯ ಸೂರಜ್ ತಂಗಿಯ ಗಂಡನಾಗಿ ಅಲ್ಲದೆ, ಅವಿನಾಶ್, ಸುಮಿತ್ರಾ, ಸಾಧು ಕೋಕಿಲಾ, ಎಂ.ಎನ್. ಲಕ್ಷ್ಮೀದೇವಿ ಉಳಿದ ತಾರಾಗಣದಲ್ಲಿದ್ದಾರೆ.
ಈ ವಾರ ತೆರೆಗೆ ಮುಸ್ಸಂಜೆ ಗೆಳತಿ
Manohar. R.(Manu),
chitrataramanu@gmail.com
Photo Journalist
M: 9845549026
: 9844904440