Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪುನೀತ್ ಈಗ "ಪೃಥ್ವಿ" ೧೫ರಿಂದ ಚಿತ್ರೀಕರಣ !
Posted date: 5/October/2009

 ಹಲವಾರು ಯಶಸ್ವೀ ಚಿತ್ರಗಳನ್ನು ತೆರೆಗರ್ಪಿಸಿದ ನಿರ್ಮಾಪಕ ಸೂರಪ್ಪ ಬಾಬು ಮತ್ತೊಬ್ಬ ನಿರ್ಮಾಪಕ ಎನ್.ಎಸ್.ರಾಜಕುಮಾರ್ ಜೊತೆಗೂಡಿ ಅದ್ದೂರಿ "ಪೃಥ್ವಿ" ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕಾಗಿ ಇದೇ ೨ರ ಗಾಂಧಿಜಯಂತಿಯಂದು ಆಕಾಶ್ ಸ್ಟುಡಿಯೋವಿನಲ್ಲಿ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಐದು ಗೀತೆಗಳ ಧ್ವನಿಮುದ್ರಣ ಕಾರ್ಯ ಆರಂಭವಾಯಿತು.


    ಗೀತೆಗಳ ಧ್ವನಿಮುದ್ರಣ ಸಮಾರಂಭಕ್ಕೆ ಚಿತ್ರೋದ್ಯಮದ ಹಲವಾರು ಗಣ್ಯರು ಆಗಮಿಸಿ ನಿರ್ಮಾಪಕ, ನಿರ್ದೆಶಕರಿಗೆ ಶುಭಕೋರಿದರು.


    ಚಿತ್ರಕ್ಕೆ ಇದೇ ೧೫ ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದು ಚಿತ್ರವನ್ನು ಈ ವರ್ಷದ ಯಶಸ್ವೀ "ಸವಾರಿ" ಚಿತ್ರವನ್ನು ನಿರ್ದೇಶಿಸಿದ ಯುವ ನಿರ್ದೇಶಕ ಜೇಕಬ್ ವರ್ಗೀಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಕಾಣಿಕೊಳ್ಳಲಿರುವ ಚಿತ್ರದ ನಾಯಕಿ ಹಾಗೂ ಉಳಿದ ತಾರಾಬಳಗದ ಆಯ್ಕೆ ಇದೀಗ ಭರದಿಂದ ಸಾಗಿದೆ.


Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪುನೀತ್ ಈಗ "ಪೃಥ್ವಿ" ೧೫ರಿಂದ ಚಿತ್ರೀಕರಣ ! - Chitratara.com
Copyright 2009 chitratara.com Reproduction is forbidden unless authorized. All rights reserved.