Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾತಿನ ಮರುಲೇಪನ ಮುಗಿಸಿದ "ಗಿಮಿಕ್"
Posted date: 08 Mon, Apr 2019 – 08:41:03 AM

ಸಾಮಿ ಪಿಕ್ಚರ‍್ಸ್ ಲಾಂಛನದಡಿಯಲ್ಲಿ ಶ್ರೀ ದೀಪಕ್ ನಿರ್ಮಿಸುತ್ತಿರುವ "ಗಿಮಿಕ್" ಚಿತ್ರಕ್ಕೆ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಮಾತಿನ ಮರು ಲೇಪನಕಾರ್ಯ ಮುಕ್ತಾಯಗೊಂಡಿತು.

ಚಿತ್ರಕ್ಕೆ ಇದೀಗ ರಿರಿಕಾರ್ಡಿಂಗ್‌ ಕಾರ್ಯ ಆರಂಭಗೊಂಡಿದ್ದು, ಅತಿ ಶೀಘ್ರದಲ್ಲೇ ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.  

ಚಿತ್ರಕ್ಕೆ ನಂಜುಂಡ ಸಂಭಾಷಣೆ, ಕವಿರಾಜ್ ಸಾಹಿತ್ಯ, ಅರ್ಜುನ್‌ ಜನ್ಯಾ, ಸಂಗೀತ ವಿಘ್ನೇಶ್‌ ಛಾಯಾಗ್ರಹಣ, ಸುರೇಶ್‌ ಕಲೆ, ಮುರಳಿ, ನೃತ್ಯ, ಸುರೇಶ್‌ ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರ, ರಾಮಣ್ಣ ನಿರ್ಮಾಣ, ನಿರ್ವಹಣೆಯಿದ್ದು ಚಿತ್ರವನ್ನು ಸಂಗೊಳ್ಳಿ ರಾಯಣ್ಣ, ಮುನಿರತ್ನ ಕುರುಕ್ಷೇತ್ರ ಹೆಸರಾಂತ ಚಿತ್ರಗಳನ್ನು ನಿರ್ದೇಶಿಸಿದ ನಾಗಣ್ಣ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಗಣೇಶ್, ರೋನಿಕಾ ಸಿಂಗ್, ಸುಂದರ ರಾಜ್, ಶೋಭ ರಾಜ್, ಮಂಡ್ಯರಮೇಶ್, ಚಿ. ಗುರುದತ್, ರವಿಶಂಕರ್‌ ಗೌಡ, ಸಂಗೀತಾ, ಶ್ವೇತಾ ಮುಂತಾದವರಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾತಿನ ಮರುಲೇಪನ ಮುಗಿಸಿದ "ಗಿಮಿಕ್" - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95