Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಸಂ ಪೋಸ್ಟರ್‌ನ್ನು ಶಿವರಾಜ್‌ಕುಮಾರ್ ರ್ಬಿಡುಗಡೆ ಮಾಡಿದರು
Posted date: 26 Mon, Oct 2020 – 04:34:10 PM

ಹೊಸಬರ ರಸಂ ಚಿತ್ರದಲ್ಲಿ ಒಂದುಕಡೆಕೈಯಲ್ಲಿ ಸಿಗರೇಟು,ಎಣ್ಣೆ ಗ್ಲಾಸು ಮತ್ತೋಂದುಕಡೆ ಸೀರೆ,ತಾಳಿ ಮತ್ತು ಕಾಲುಂಗುರ ಇರುವ ಪೋಸ್ಟರ್‌ನ್ನು ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಗೌರವ್‌ ರಾಜೇಶ್ ನೋಡಿರುವ, ಕೇಳಿರುವ ಅಂಶಗಳನ್ನು ಹೆಕ್ಕಿಕೊಂಡು ಸಿನಿಮಾಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ  ಕಳಕಳಿ ಇರುವ ಘಟನೆಗಳು ಪ್ರತಿಯೊಬ್ಬರ ಮನೆಯಲ್ಲಿ ನಡೆಯುತ್ತಿರುತ್ತದೆ. ವಯಸ್ಸುಮೀರಿದ ಯುವಕನೊಬ್ಬ ಹಿರಿಯರು ನಿಶ್ವಿಯಿಸಿದ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಾನೆ. ಆದರೆ ಆಕೆಯು ಪ್ರಿಯಕರನ ಜೊತೆ ಸೇರಿಕೊಂಡು ಮೋಸ ಮಾಡಿದಾಗ ಆತನ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಹಾಸ್ಯ ಕುತೂಹಲದ ಮೂಲಕ ಹೇಳಲಾಗುತ್ತಿದೆ.ಇದರಲ್ಲಿ ಒಂದಷ್ಟು  ಥ್ರಿಲ್ಲರ್ ಸನ್ನಿವೇಶಗಳು ಬರುತ್ತದಂತೆ. ಬೆಂಗಳೂರು, ಮಂಗಳೂರು ಹಾಗೂ ಮಂಡ್ಯಾ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಅಂಬರೀಷ್‌ ಸಾರಂಗಿ, ಎಂ.ವಿಘ್ನೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಗಾಗಿ ಶೋಧ ನಡೆಯುತ್ತಿದೆ. ಉಳಿದಂತೆ ತುಳು ನಟ ಅರವಿಂದ್‌ ಬೋಳಾರ್  ಮುಂತಾದವರು ನಟಿಸುತ್ತಿದ್ದಾರೆ. ಜೆ.ಎಂ.ಪ್ರಹ್ಲಾದ್-ಅಭಿ-ಚಿರಾಗ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಆರ್.ಡಿ.ವರ್ಮ-ಸಂದೇಶ್‌ ಬಾಬು ಜಂಟಿಯಾಗಿ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ವಿನಯ್‌ಹೊಸಗೌಡರ್‌ಅವರದಾಗಿದೆ. ಸತೀಶ್‌ರಾಜ್-ಭರತ್ ಮಾತುಗಳಿಗೆ ಪದಗಳನ್ನು ಪೋಣಿಸುತ್ತಿದ್ದಾರೆ.ಅನುಗ್ರಹ ಫಿಲಿಂಸ್ ಮೂಲಕ ಮಂಗಳೂರು ಉದ್ಯಮಿ ನಿರ್ಮಾಣ ಮಾಡುತ್ತಿರುವ ಸಿನಿಮಾವುಡಿಸೆಂಬರ್‌ದಿಂದ ಚಾಲನೆ ಸಿಗಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಸಂ ಪೋಸ್ಟರ್‌ನ್ನು ಶಿವರಾಜ್‌ಕುಮಾರ್ ರ್ಬಿಡುಗಡೆ ಮಾಡಿದರು - Chitratara.com
Copyright 2009 chitratara.com Reproduction is forbidden unless authorized. All rights reserved.