Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಕ್ಕಿ ರೊಟ್ಟಿಗೂ ಕೂರ್ಗಿಯರಿಗೂ ಬಿಡಿಸಲಾಗದ ನಂಟಿದೆ; ಯೂವರ್ಸ್ ಲೈಫ್​ನಲ್ಲಿ ರಶ್ಮಿಕಾ ಮಂದಣ್ಣ
Posted date: 06 Sun, Dec 2020 – 11:11:23 AM

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್​ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್​ಲೈನ್​ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ ಸಾಹಸಕ್ಕೆ ಸದ್ಯ ಟ್ರೆಂಡಿಂಗ್​ನಲ್ಲಿರುವ ಕನ್ನಡತಿ, ಸೌತ್ ಸೆನ್ಸೆಷನಲ್ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ. ಈ ಹಿಂದೆ ಕೋಳಿ ಕರಿ ಮಾಡುವುದನ್ನು ಹೇಳಿಕೊಟ್ಟಿದ್ದ ರಶ್ಮಿಕಾ, ಈ ಸಲ ಕೂರ್ಗಿ ಶೈಲಿಯ ಅಕ್ಕಿ ರೊಟ್ಟಿಯ ತಮಗೆಷ್ಟು ಹಾಟ್ ಫೇವರಿಟ್ ಎಂಬುದನ್ನು ಶೋದಲ್ಲಿ ಹೇಳಿಕೊಂಡಿದ್ದಾರೆ.
ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್​ಲೈಫ್​ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife.co.in. ಅನ್ನೋ ನೂತನ ವೆಬ್​ಸೈಟ್​ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್​​ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಓದುಗರಿಗೆ ಅತ್ಯುತ್ತಮವಾದ ಡಯಟ್​ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife.co.in. ನಲ್ಲಿ ಲಭ್ಯವಾಗಲಿದೆ.
ಈ ವಿಶೇಷಗಳ ಗುಚ್ಛದ URLife.co.in. ಗೆ ಗೆಸ್ಟ್​ ಎಡಿಟರ್​ ಆಗಿ ರಶ್ಮಿಕಾ ಮಂದಣ್ಣ ಭಾಗವಹಿಸಿ ಉಪಾಸನಾಗೆ ಹೆಲ್ತಿ ಫುಡ್​ ರೆಡಿ ಮಾಡುವ ಬಗೆಯನ್ನು ಹೇಳಿಕೊಡುತ್ತಿದ್ದರು. ಇತ್ತೀಚೆಗಷ್ಟೇ ಕೋಳಿ ಕರಿ ಮಾಡುವುದನ್ನು ಹೇಳಿಕೊಟ್ಟಿದ್ದರು. ಇದೀಗ ಅಕ್ಕಿ ರೊಟ್ಟಿಯನ್ನು ರಶ್ಮಿಕಾ ಸವಿದಿದ್ದಾರೆ. ಕೂರ್ಗಿಯರಿಗೆ ಅಕ್ಕಿ ರೊಟ್ಟಿ ಎಷ್ಟೊಂದು ಇಷ್ಟದ ತಿನಿಸು ಎಂಬುದನ್ನು ಹೇಳಿದ್ದಾರೆ.
‘ನಮ್ಮ ಮನೆಯಲ್ಲಿ ಬೆಳಗ್ಗೆಯೇ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೂರ್ಗಿಗಳಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟ ಎಂದಿದ್ದಾರೆ.   
ಭಾರತೀಯ ಕಾರ್ಪೊರೇಟ್ ವಲಯದಲ್ಲಿ URLife.co.in 14 ಮಿಲಿಯನ್ ಗೂ ಅಧಿಕ ಓದುಗರನ್ನು ಒಳಗೊಂಡ ಭಾರತದ ಅತಿದೊಡ್ಡ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ತಜ್ಞರ ಸಲಹೆ, ಅತ್ಯಾವಶ್ಯಕ ಸಂಪಾದಕೀಯ ವಿಷಯ, ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ. ಭಾರತದ ಕಿರಿಯ ಮತ್ತು ಅತ್ಯಂತ ಕ್ರಿಯಾತ್ಮಕ ಯೋಗಕ್ಷೇಮ ಮೇಲ್ವಿಚಾರಕರಾದ ಉಪಾಸನ ಕೊನಿಡೆಲಾ ಅವರ ಮಾರ್ಗದರ್ಶನದಲ್ಲಿ URLife.co.in ಅಭಿವೃದ್ಧಿಪಡಿಸಲಾಗಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಕ್ಕಿ ರೊಟ್ಟಿಗೂ ಕೂರ್ಗಿಯರಿಗೂ ಬಿಡಿಸಲಾಗದ ನಂಟಿದೆ; ಯೂವರ್ಸ್ ಲೈಫ್​ನಲ್ಲಿ ರಶ್ಮಿಕಾ ಮಂದಣ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.