Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎರಡನೇ ವರ್ಷದ ಸಂಭ್ರಮದಲ್ಲಿ ಸಿರಿ ಕನ್ನಡ
Posted date: 09 Wed, Dec 2020 – 03:11:29 PM

ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ’ಸಿರಿ ಕನ್ನಡ’ ವಾಹಿನಿಯು ಯಶಸ್ವಿ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಸಿನಿಮಾ  ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಸಪಲವಾಗಿದೆ. ಹೊಸದಾಗಿ ಆರಂಭವಾದರೂ ಎವರ್‌ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಸ್ಥಾನ ಭದ್ರಪಡಿಸಿಕೊಂಡು, ಇಂದು ಸಂಪೂರ್ಣ ಮನರಂಜನಾ ವಾಹಿನಿಯಾಗಿ ಕರ್ನಾಟಕದಲ್ಲಿ ಕಂಗೊಳಿಸುತ್ತಿದೆ.

ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ಗೇಮ್ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ  ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ "ಕ್ಯಾಶ್ ಬಾಕ್ಸ್" ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು ೧೨೦ ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ.  ನಟಿ ಸುಜಾತ ನಿರೂಪಣೆಯ "ಸಿನಿಪಾಕ"ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ "ಟೂರಿಂಗ್ ಟಾಕೀಸ್" ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂದು ವಾಹಿನಿಯ ಮುಖ್ಯಸ್ಥರಾದ ಸಂಜಯ್‌ಶಿಂದೆಯವರು ಸಂತಸ ಹಂಚಿಕೊಂಡಿದ್ದಾರೆ.

ಕನ್ನಡಿಗರಿಗಾಗಿಯೇ ರೂಪುಗೊಂಡ ’ಸಿರಿ ಕನ್ನಡ’ ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ "ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ" ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎರಡನೇ ವರ್ಷದ ಸಂಭ್ರಮದಲ್ಲಿ ಸಿರಿ ಕನ್ನಡ - Chitratara.com
Copyright 2009 chitratara.com Reproduction is forbidden unless authorized. All rights reserved.