ಕುಮಾರ್ ಗೋವಿಂದು, ರಮೇಶ್ ಅರವಿಂದ್, ಸುಧಾರಾಣಿ ಹಾಗೂ ಬಿ.ಸರೋಜಾದೇವಿ ಅವರ ತಾರಾಬಳಗದಲ್ಲಿ ಹಾಗೂ ವಿ.ಉಮಾಕಾಂತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಅನುರಾಗ ಸಂಗಮ ಚಿತ್ರ ಬಿಡುಗಡೆಯಾಗಿ ಇಂದಗೆ 25 ವರ್ಷ ತುಂಬಿದೆ.
8.12.1995 ರಂದು ಬಿಡುಗಡೆಯಾದ ಈ ಚಿತ್ರ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು.
ವಿ.ಮನೋಹರ್ ಅವರು ಸಂಗೀತ ನೀಡಿದ್ದ, ಎಸ್ ಪಿ ಬಿ, ಚಿತ್ರ ಹಾಗೂ ರಮೇಶ್ ಚಂದ್ರ ಅವರು ಹಾಡಿರುವ
ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಗಾಯಕ ರಮೇಶ್ ಚಂದ್ರ ಈ ಚಿತ್ರದ ಗಾಯನಕ್ಕೆ ರಾಜ್ಯಪ್ರಶಸ್ತಿ ಪಡೆದಿದ್ದರು.
ಭಾರತದ ಇತರ ಭಾಷೆಗಳಿಗೂ ಈ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿ ಅಲ್ಲೂ ಯಶಸ್ವಿಯಾಗಿದೆ.
ಎಸ್.ಕೆ ಫಿಲಂಸ್ ಮೂಲಕ ಡಿ.ಗೋವಿಂದಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದರು.
ಅನುರಾಗ ಸಂಗಮದ ಯಶಸ್ಸಿಗೆ ಮಾಧ್ಯಮದ ಪ್ರೋತ್ಸಾಹವು ಬಹುಮುಖ್ಯ. ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಕುಮಾರ್ ಗೋವಿಂದು ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸಿದ್ದಾರೆ.