Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀಲಕ್ಷ್ಮೀನರಸಿಂಹಸ್ವಾಮಿ‌‌ ಸನ್ನಿಧಿಯಲ್ಲಿ `ಬಂತು ಪರಿಹಾರ`
Posted date: 13 Sun, Dec 2020 01:35:12 PM

ಲಕ್ಷ್ಮೀ ಕಲಾಮಂದಿರ ಫಿಲಂಸ್ ಲಾಂಛನದಲ್ಲಿ ‌ಕೆ.ಸಿ.ಗೋವಿಂದಪ್ಪ ಅಂಡ್ ಸನ್ಸ್ ಹಾಗೂ ಜಾಹಿದ್ ಖಾನ್ ಅವರು ನಿರ್ಮಿಸುತ್ತಿರುವ`ಬಂತು ಪರಿಹಾರ` ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಮೊದಲ ‌ದೃಶ್ಯಕ್ಕೆ ಮಹಾವೀರ್‌ ಜೈನ್ ಆರಂಭ ಫಲಕ ತೋರಿದರು. ದೇವಸ್ಥಾನದ ಧರ್ಮದರ್ಶಿಗಳಾದ ವೆಂಕಟೇಶ್ ಅವರು ಕ್ಯಾಮೆರಾ ಚಾಲನೆ ಮಾಡಿದರು.
ವೇಮಗಲ್ ಜಗನ್ನಾಥ್ ರಾವ್  ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

ಪ್ರವಾಹ ಬಂದು ಸುಮಾರು ಹಳ್ಳಿಗಳು ಕೊಚ್ಚಿ ಹೋಗಿರುತ್ತದೆ. ಒಂದು ಹಳ್ಳಿಯಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಇಬ್ಬರು ಮಕ್ಕಳು ಬದುಕಿರುತ್ತಾರೆ. ಅವರ ಹೋರಾಟದ ಬಗ್ಗೆಗಿನ ಕಥಾಹಂದರ ಈ ಚಿತ್ರದಲ್ಲಿದೆ.

ಸಾಮಾಜಿಕ‌ ಕಳಕಳಿಯಿರುವ ಈ ಚಿತ್ರದ ತಾರಾಬಳಗದಲ್ಲಿ ನಕುಲ್ ಗೋವಿಂದ್, ಬೇಬಿ ಮನಸ್ವಿನಿ ಗೋವಿಂದ್, ಕೆ.ಹೆಚ್.ಮೀಸೆಮೂರ್ತಿ, ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ.

ನಕುಲ್ ಗೋವಿಂದ್ ಈ ಹಿಂದೆ ಸಾಕ್ಷಿ, ಭೀಷ್ಮ, ರಸಪುರಿ, ಕಿಲಾಡಿ ಪೊಲೀಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ  ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅಕ್ಷಯ್ ಜೈನ್ ಸಂಗೀತ ನೀಡುತ್ತಿದ್ದಾರೆ ಸೂರಿ ಸಂಶಯ್ ಛಾಯಾಗ್ರಹಣ, ಶಿವಪ್ರಾಸಾದ್ ಯಾದಾವ್ ಸಂಕಲನ ಹಾಗೂ ಕೆ.ಹೆಚ್ ಮೀಸೆ ಮೂರ್ತಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀಲಕ್ಷ್ಮೀನರಸಿಂಹಸ್ವಾಮಿ‌‌ ಸನ್ನಿಧಿಯಲ್ಲಿ `ಬಂತು ಪರಿಹಾರ` - Chitratara.com
Copyright 2009 chitratara.com Reproduction is forbidden unless authorized. All rights reserved.