Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾಶಿವರಾತ್ರಿಯಂದು ಚಾಲೆಂಜಿಂಗ್ ಸ್ಟಾರ್ ಅಭಿನಯದ ``ರಾಬರ್ಟ್`` ಚಿತ್ರ ಬಿಡುಗಡೆ
Posted date: 10 Wed, Mar 2021 03:09:13 AM

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ , ಬಹು ನಿರೀಕ್ಷಿತ ``ರಾಬರ್ಟ್`` ಚಿತ್ರ ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆಯಾಗುತ್ತಿದೆ.
ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿ.ಹರಿಕೃಷ್ಣ ಅವರದು‌.
ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ರಾಮ್ - ಲಕ್ಷ್ಮಣ್, ಅನ್ಬು - ಅರಿವು, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಸಂತೋಷ್ ಅವರ ನೃತ್ಯ ನಿರ್ದೇಶನವಿರುವ ``ರಾಬರ್ಟ್`` ಚಿತ್ರಕ್ಕೆ ರಾಜಶೇಖರ್ ಹಾಗೂ ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ.
ದರ್ಶನ್ ಸೋಮಶೇಖರ್ ಹಾಗೂ ಚಿರಾಗ್ ಆರ್ ಗೌಡ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್, ಸೋನಾಲ್ ಮಾಂಟೆರೊ, ಜಾನ್ಸನ್ ಡಿಸೋಜ,  ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ರವಿಕಿಶನ್, ರವಿಶಂಕರ್, ಅಶೋಕ್, ಅವಿನಾಶ್, ದಿಲೀಪ್ ಶೆಟ್ಟಿ, ರವಿಚೇತನ್, ಶ್ರೀಧರ್  ರಾವ್, ಹರ್ಷ, ಸುಚೀಂದ್ರ ಪ್ರಸಾದ್, ಚಂದು ಗೌಡ, ಈಟಿವಿ ಶ್ರೀಧರ್, ಯೂಟರ್ನ್ ಕೃಷ್ಣ, ತೇಜಸ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾಶಿವರಾತ್ರಿಯಂದು ಚಾಲೆಂಜಿಂಗ್ ಸ್ಟಾರ್ ಅಭಿನಯದ ``ರಾಬರ್ಟ್`` ಚಿತ್ರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.