Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾರ್ಚ್ 19ಕ್ಕೆ ಬರಲಿದೆ ನೈಜ ಘಟನೆ ಆಧರಿತ ಒಂದು ಗಂಟೆಯ ಕಥೆ ಸಿನಿಮಾ
Posted date: 14 Sun, Mar 2021 03:42:31 PM

ರಾಷ್ಟ್ರದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳನ್ನು ಆಧರಿಸಿ ಒಂದು ಗಂಟೆಯ ಕಥೆ  ಚಿತ್ರ ನಿರ್ಮಾಣವಾಗಿದ್ದು, ಹಾಸ್ಯಮಯವಾಗಿ ತೆರೆಗೆ ಬರುತ್ತಿದೆ. ಇದು ಸಂಪೂರ್ಣ ಹೆಣ್ಣುಮಕ್ಕಳ ಪರವಾದ ಚಿತ್ರವಾದರೂ, ಎಲ್ಲರೂ ನೋಡಲೇಬೇಕಾದ ಚಿತ್ರ. ನಿರ್ದೇಶಕ ದ್ವಾರ್ಕಿ ರಾಘವ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಿಯಲ್ ವೆಲ್ತ್ ವೆಂಚರ್ ಬ್ಯಾನರ್ ನಲ್ಲಿ ಕಶ್ಯಪ್ ದಾಕೋಜು. ಕೆ.ಎಸ್. ದುಶ್ಯಂತ್, ಶ್ವೇತಾ ಒಟ್ಟಿಗೆ ಸೇರಿ ಈ ಚಿತ್ರ ನಿರ್ವಿುಸಿದ್ದಾರೆ. ಈ ಸಿನಿಮಾ ಬಗ್ಗೆ ಹೇಳಿಕೊಳ್ಳುವ ಉದ್ದೇಶಕ್ಕೆ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು.
ನಿರ್ಮಾಪಕ ಕಶ್ಯಪ್ ದಾಕೋಜು ಮಾತನಾಡಿ, ಇದುವರೆಗೂ ನಾನು 5 ಸಿನಿಮಾ ನಿರ್ಮಾಣ ಮಾಡಿದ್ದೇನೆ. ಅದರಲ್ಲಿ ಮೂರು ಹೆಣ್ಣುಮಕ್ಕಳಿಗೆ  ಸಂಬಂಧಿಸಿದ್ದು. ಸಮಾಜ, ಕರಾವಳಿ ಹುಡುಗಿ ಮತ್ತು ಇದೀಗ ಮೂರನೇಯ ಸಿನಿಮಾ ಒಂದು ಗಂಟೆಯ ಕಥೆ. ಇದು ಸಂಪೂರ್ಣ ನೈಜ ಕಥೆಯಾದರೂ ಕಾಮಿಡಿ ಶೈಲಿಯಲ್ಲಿಯೇ ಸಂಪೂರ್ಣ ಚಿತ್ರ ಮಾಡಿದ್ದೇವೆ. ಇದೇ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.  ಸೆನ್ಸಾರ್ ನಿಂದಲೂ ಯಾವುದೇ ಕಟ್ ಸಿಕ್ಕಿಲ್ಲ. ನೋಡಿ ಹರಸಿ ಎಂದರು.
ಚಿತ್ರದ ನಾಯಕ ಅಜಯ್ ರಾಜ್ ಮಾತನಾಡಿ, ಎರಡು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದೀಗ ಈ ಚಿತ್ರದಲ್ಲಿ ನಾಯಕನಾಗಿದ್ದೇನೆ. ರಾಘವ್, ಶಶಿಕಾಂತ್, ಮಣಿಕಾಂತ್ ಕದ್ರಿ, ಜೇಕಬ್ ವರ್ಗಿಸ್ ನನ್ನ ಬೆಳವಣಿಗೆಗೆ ಕಾರಣೀಕರ್ತರು. ಹೀಗಿರುವಾಗಲೇ ದ್ವಾರ್ಕಿ ಮತ್ತು ನನ್ನ ನಡುವೆ ಸಿನಿಮಾ ಮಾಡಬೇಕೆಂಬ ಚರ್ಚೆ ನಡೆಯುತ್ತಲೇ ಇತ್ತು. ಆಗ ನೈಜ ಘಟನೆ ಸಿನಿಮಾ ಮಾಡುವ ಬಗ್ಗೆ ಚರ್ಚೆಯಾಯ್ತು. ಅದು ಬೇರೆಯದೇ ರೀತಿಯಲ್ಲಿ ಇದ್ದಿದ್ದರಿಂದ ಆರಂಭದಲ್ಲಿ ಇರಿಸುಮುರುಸಾಯ್ತು. ಆದರೆ, ರಂಗಭೂಮಿಯ ನಟನಾಗಿದ್ದರಿಂದ ಹೊಸ ಪ್ರಯತ್ನ ಅಷ್ಟೇ ಚಾಲೆಂಜಿಂಗ್ ಆಗಿತ್ತು. ಆ ಘಟನೆಯ ಸಂದೇಶ ಎಲ್ಲರಿಗೂ ರವಾನಿಸಬೇಕು ಎಂಬ ಕಾರಣಕ್ಕೆ ಒಪ್ಪಿಕೊಂಡೆ. 120 ಜನ ಕಲಾವಿದರು ಈ ಸಿನಿಮಾದಲ್ಲಿದ್ದಾರೆ ಎಂದರು.
ಚಿತ್ರದ ನಾಯಕಿ, ಶನಾಯಾ ಕಾಟ್ವೆ ಮಾತನಾಡಿ, ತುಂಬ  ವಿಭಿನ್ನ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಇಡೀ ತಂಡದೊಟ್ಟಿಗೆ ಖುಷಿಯಲ್ಲಿಯೇ ಕೆಲಸ ಮಾಡಿದ್ದೇವೆ. ನೋಡಿ ಹರಸಿ ಎಂದರು.
ನಿರ್ದೇಶಕ ದ್ವಾರ್ಕಿ ಮಾತನಾಡಿ, ಮೊದಲಿಗೆ ಈ ಸಿನಿಮಾಕ್ಕೆ ದುಡಿದ ಅಸೋಸಿಯೇಟ್ ನಿರ್ದೇಶಕರಾದ ಸಂತೋಷ್ ಪ್ರೀತಮ್, ಆದರ್ಶ ಯಕ್ಷ, ಕಿರಣ್ ಗೌಡ, ರಾಜೇಶ್ ರತನ್ ಎಲ್ಲರಿಗೂ ಧನ್ಯವಾದ. ಸಿನಿಮಾದ ನಾಯಕ ಅಜಯ್ ಸಿನಿಮಾಕ್ಕೂ ಮುನ್ನ ಪರಿಚಯ. ೧೦ ವರ್ಷದ ಬಳಿಕ ಈ‌ ಕಥೆ ಹೇಳಿದ. ಕಥೆಯನ್ನು ಸಂಪೂರ್ಣ ಟೇಕ್ ಆಫ್ ಮಾಡಿದ್ದಾರೆ. ಶನಾಯಾ ತುಂಬ ಚೆನ್ನಾಗಿ ಮಾಡಿದ್ದಾರೆ ಎಂದರು.
‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ಇನ್ನುಳಿದ ತಾರಾಗಣದಲ್ಲಿ ಯಶವಂತ ಸರದೇಶಪಾಂಡೆ, ಸ್ವಾತಿಶರ್ಮಾ, ಪ್ರಕಾಶ್ ತುಮ್ಮಿನಾಡು, ಚಿದಾನಂದ್, ಚಂದ್ರಕಲಾ, ಸಿಲ್ಲಿ ಲಲ್ಲಿ ಆನಂದ್, ನಾಗೇಂದ್ರ ಷಾ, ಪ್ರಶಾಂತ್ ಸಿದ್ದಿ ಸೇರಿದಂತೆ ಒಟ್ಟು 120ಕ್ಕೂ ಅಧಿಕ ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸೂರ್ಯಕಾಂತ ಛಾಯಾಗ್ರಹಣ, ಗಣೇಶ್‌‌ ಮಲ್ಲಯ್ಯ ಸಂಕಲನ, ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾರ್ಚ್ 19ಕ್ಕೆ ಬರಲಿದೆ ನೈಜ ಘಟನೆ ಆಧರಿತ ಒಂದು ಗಂಟೆಯ ಕಥೆ ಸಿನಿಮಾ - Chitratara.com
Copyright 2009 chitratara.com Reproduction is forbidden unless authorized. All rights reserved.