ಶ್ರೀ ಗುರು ರಾಘವೇಂದ್ರ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ``ಎಸ್.ಆರ್.ಪಾಟೀಲ್`` ನಿರ್ಮಾಣ ಮಾಡುತ್ತಿರುವ ``ಚಿ.ಸೌ.ಕನ್ಯಾಕುಮಾರಿ`` ಚಿತ್ರವನ್ನ
``ಲೆಮನ್ ಪರಶುರಾಮ್`` ರ ನಿರ್ದೇಶನವಿದ್ದು, ಮೊದಲ ಬಾರಿಗೆ ನಾಯಕನಾಗಿ ರಾಘವೇಂದ್ರ ಬೆಳ್ಳಿತೆರೆ ಮೇಲೆ ಕಾಣಿಸಿಕ್ಕೊಳ್ಳುತ್ತಿದ್ದಾರೆ ಇವರಿಗೆ ನಾಯಕಿಯಾಗಿ ಬೆಳಗಾವಿ ಬೆಡಗಿ ಶೃತಿ ಪಾಟೀಲ್ ಜೊತೆಯಾಗಿ ಅಭಿನಯಿಸುತ್ತಿದ್ದಾರೆ ಇವರು ಈಗಾಗಲೇ``ಮಿಸ್ಟರಿ ಆಫ್ ಮಂಜುಳ``, ``ಬ್ಲಡ್ ಹ್ಯಾಂಡ್`` ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
``ಚಿ.ಸೌ.ಕನ್ಯಾಕುಮಾರಿ`` ಚಿತ್ರವನ್ನ ಈಗಾಗಲೇ ಯಾದಗಿರಿ ಜಿಲ್ಲೆಯ ಸುತ್ತ-ಮುತ್ತ, ಸುರಪುರ ,ಬೆಂಡೆ ಬೆಂಬಾಳೆ,ಕೆಂಬಾವಿ, ಮಾಚಗುಂಡಾಳ ಗ್ರಾಮದಲ್ಲಿ ಸುಮಾರು 30 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ.
ಇದೀಗ ಎರಡನೇ ಹಂತದ ಚಿತ್ರೀಕರಣವನ್ನ ಸುರ ಪುರ ಸುತ್ತ ಮುತ್ತ ಹಾಗೂ ಹೆಬ್ಬಾಳ್ ಪರಮಾನಂದ ದೇವಸ್ಥಾನದ ಜಾತ್ರೆಯಲ್ಲಿ ಸುಮಾರು 15 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು.
ಮುಂದಿನ ತಿಂಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡಲು ಚಿತ್ರ ತಂಡ ಸಜ್ಜಾಗಿದೆ. ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರ ಇದಾಗಿದ್ದು,
ಶ್ರೀ ರಾಮ್ ಜಂಭಗಿ ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತವಿರುವ,ಈ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯವನ್ನ ನಿರ್ದೇಶಕರಾದ ಲೇಮನ್ ಪರಶುರಾಮ್ ರವರೇ ಒದಗಿಸಿದ್ದಾರೆ.
ಅನುರಾಧ ಭಟ್,ಅನನ್ಯ ಭಟ್ ಹಾಗೂ ಸಂತೋಷ್ ವೆಂಕಿ ಸೊಗಸಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗುರುರಾಜ್ ಹೊಸಕೋಟೆ,ಜೂನಿಯರ್ ರವಿಚಂದ್ರನ್, ರಾಕ್ಸ್ ಮನು, ಮಲ್ಲಣ್ಣ ಬಾಚಿಮಟ್ಟಿ,ಕೊಮಲ,ಸುಜಾತ ಹಿರೇಮಠ್, ಚಂದ್ರಿಕಾ,ಗಂಗಾಧರ್ ಗೋಗಿಯವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.