ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘು ಡಿ.ಜಿ ಅವರು ನಿರ್ಮಿಸುತ್ತಿರುವ ``ವೇಷ`` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ. ಜುಲೈ ವೇಳೆಗೆ ಚಿತ್ರ ತೆರೆಗೆ ಬರಲಿದೆ.
ಚಿಕ್ಕಮಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಕುಂದಾಪುರ ಹಾಗೂ ಆಗುಂಬೆಯ ಸುಂದರ ಸ್ಥಳದಲ್ಲಿ ``ವೇಷ`` ದ ಚಿತ್ರೀಕರಣ ನಡೆದಿದೆ.
ಕನ್ನಡದ ಕೆಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿರುವ ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಈ ಚಿತ್ರದ ನಿರ್ದೇಶಕರು. ಕುತೂಹಲ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ``ವೇಷ`` ಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ ನೀಡಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ, ಸನತ್ ಉಪ್ಪುಂದ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರು ಸಾಹಸ ನಿರ್ದೇಶನವಿರುವ ``ವೇಷ ``ದ ಮಾತುಗಳನ್ನು ಪವನ್ ಕುಮಾರ್ ಬರೆದಿದ್ದಾರೆ.
ರಘು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಖ್ಯ ಗೌಡ. ನಿಧಿ ಮಾರೊಲಿ ಮಂಜು ಪಾವಗಡ, ಪ್ರಿಯಾಂಕ ಕಾಮತ್, ವಾಣಿಶ್ರೀ, ಜಯ್ ಶೆಟ್ಟಿ, ಶಿಲ್ಪ ಕುಮಟಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.