Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಶಬರಿ ಸರ್ಚಿಂಗ್ ಫಾರ್ ರಾವಣ`ಚಿತ್ರದಲ್ಲಿ ರಚಿತಾರಾಮ್ ಶಬರಿಯಾಗಿ
Posted date: 22 Thu, Apr 2021 11:42:35 AM
ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ `ಶಬರಿ ಸರ್ಚಿಂಗ್ ಫಾರ್ ರಾವಣ` ಚಿತ್ರದ ಫಸ್ಟ್ ಲುಕ್  ಬಿಡುಗಡೆಯಾಗಿದೆ. ಮಹಿಳಾಪ್ರದಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ಡಿಂಪಲ್‌ಕ್ವೀನ್ ರಚಿತಾರಾಮ್ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ೩೬ನೇ ಚಿತ್ರವಾಗಿದೆ. ಶ್ರೀರಾಮನವಮಿಯ ದಿನವೇ ರಚಿತಾರಾಮ್ ಶಬರಿಯಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರಾಮನವಮಿ ಹಬ್ಬದ  ವಿಶೇಷವಾಗಿ ಶಬರಿ ಸರ್ಚಿಂಗ್ ಫಾರ್ ರಾವಣ  ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಉಗ್ರಾವತಾರ ತಾಳಿರುವ ರಚಿತಾರಾಮ್ ಅವರ ವಿಭಿನ್ನಲುಕ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಇನ್ನು ಈ ಚಿತ್ರಕ್ಕೆ ಯುವನಿರ್ದೇಶಕ ನವೀನ್‌ಶೆಟ್ಟಿ ಅವರು ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಕೇಶವ್-ಚೇತನ್ ಚಿತ್ರಕಥೆ ಹೆಣೆದಿದಾರೆ. ಈವರೆಗೆ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್‌ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಮಹಿಳಾಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಕುತೂಹಲವಾಗಿದೆ. ಕರೋನಾ ಹಾವಳಿ ಕಡಿಮೆಯಾದರೆ, ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್ ಆರ್ಮುಗಂ ಅವರ ಸಂಕಲನ, ವಿಶಾಲ್‌ಕುಮಾರ್‌ಗೌಡ ಅವರ ಕ್ಯಾಮೆರಾವರ್ಕ್ ಇರುತ್ತದೆ. ರಘು ಮುಖರ್ಜಿ, ಅಚ್ಯುತ್‌ಕುಮಾರ್, ಪ್ರದೀಪ್ ನಾರಾಯಣ್,  ಅರ್ಚನಾ ಕೊಟ್ಟಿಗೆ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಶಬರಿ ಸರ್ಚಿಂಗ್ ಫಾರ್ ರಾವಣ`ಚಿತ್ರದಲ್ಲಿ ರಚಿತಾರಾಮ್ ಶಬರಿಯಾಗಿ - Chitratara.com
Copyright 2009 chitratara.com Reproduction is forbidden unless authorized. All rights reserved.